ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿಶಾ ರವಿ ವಿಚಾರವಾಗಿ ಹೆಚ್ಚು ಮಾತಾಡಲ್ಲ: ಬೊಮ್ಮಾಯಿ

ಬೆಂಗಳೂರು: ದಿಶಾ ರವಿ ಪೊಲೀಸ್ ಕಸ್ಟಡಿ ವಿಚಾರವಾಗಿ ನಾನು ಹೆಚ್ಚು ಏನನ್ನೂ ಹೇಳಲಾರೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ.

ಇಂದು ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೆಹಲಿ ರೈತ ಪ್ರತಿಭಟನೆ ಹಾಗೂ ಹಿಂಸಾಚಾರ ಟೂಲ್‍ಕಿಟ್ ಪ್ರಕರಣದಲ್ಲಿ ಬೆಂಗಳೂರಿನ ದಿಶಾ ರವಿಯನ್ನು ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ಈ ವಿಚಾರವಾಗಿ ಸ್ಥಳೀಯ ಪೊಲೀಸರಿಗೆ ಮಾಹಿತಿ ಇಲ್ಲ. ಬೇರೆ ಬೇರೆ ರೀತಿಯ ಪ್ರಕರಣಗಳಿರುತ್ತದೆ. ಪ್ರೋಟೋಕಾಲ್ ಕೆಲವೊಂದರಲ್ಲಿ ಅನುಸರಿಸಲ್ಲ. ನಾವು ಕೂಡ ರಾಜ್ಯದ ಹೊರಗೆ ಹೋಗಿ ಹಲವರನ್ನು ಬಂಧಿಸುತ್ತೇವೆ. ಇದೀಗ ದೆಹಲಿ ಪೊಲೀಸರ ಬಳಿ ದಿಶಾ ವಿರುದ್ಧ ಕೆಲವು ಸಾಕ್ಷ್ಯಗಳಿದ್ದು, ಅವರ ವಿರುದ್ಧ ದೂರು ದಾಖಲಾಗಿದೆ. ಸದ್ಯ ಪ್ರಕರಣ ದೆಹಲಿ ಕೋರ್ಟ್‍ನಲ್ಲಿದೆ. ಹೀಗಾಗಿ ನಾನು ಈ ವಿಚಾರದಲ್ಲಿ ಹೆಚ್ಚಿಗೆ ಹೇಳಲಾರೆ ಎಂದಿದ್ದಾರೆ.

Edited By : Nagaraj Tulugeri
PublicNext

PublicNext

15/02/2021 02:17 pm

Cinque Terre

30.91 K

Cinque Terre

0

ಸಂಬಂಧಿತ ಸುದ್ದಿ