ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೋಣಿ ವಿಹಾರ ಮಾಡುವ ವೀಡಿಯೊವನ್ನು ಹಂಚಿಕೊಂಡ ಪ್ರಿಯಾಂಕಾ

ಲಕ್ನೊ: ಮೌನಿ ಅಮವಾಸ್ಯೆ ಹಿನ್ನಲೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅಲಹಾಬಾದ್ ಬಳಿಯ ಪವಿತ್ರ ಸಂಗಮದಲ್ಲಿ ಮಿಂದೆದ್ದಿದ್ದಾರೆ. ಗಂಗಾ, ಯಮುನಾ ಮತ್ತು ಸರಸ್ವತಿ ನದಿ ಸೇರುವ ಸಂಗಮ ಬಳಿ ಆಗಮಿಸಿದ ಪ್ರಿಯಾಂಕಾ ವಾದ್ರಾ, ನದಿಯಲ್ಲಿ ಪುಣ್ಯಸ್ನಾನ ಮಾಡಿ ಪೂಜೆ ಸಲ್ಲಿಸಿದರು.

ಪ್ರಿಯಾಂಕಾ ಅವರ ಜೊತೆ ಅವರ ಪುತ್ರಿ, ಕಾಂಗ್ರೆಸ್ ಶಾಸಕಿ ಆರಾಧನ ಮಿಶ್ರಾ ಕೂಡ ಇದ್ದರು. ನಂತರ ದೋಣಿ ವಿಹಾರ ನಡೆಸಿದ ಪ್ರಿಯಾಂಕಾ ಅಲ್ಲಿಂದ ಆನಂದ ಭವನಕ್ಕೆ ತೆರಳಿ ಮಕ್ಕಳ ಆಶ್ರಮಕ್ಕೆ ಭೇಟಿ ನೀಡಿ ಪುಟಾಣಿ ಮಕ್ಕಳೊಂದಿಗೆ ಪ್ರೀತಿಯಿಂದ ಮಾತನಾಡಿಸಿದರು.

ಇನ್ನು ದೋಣಿ ವಿಹಾರದಿಂದ ಸಂತೋಷಗೊಂಡ ಅವರು ದೋಣಿ ವಿಹಾರಕ್ಕೆ ಸಾಥ್ ಕೊಟ್ಟ ಸುಜೀತ್ ನಿಷಾದ್ ಅವರಿಗೆ ವಿಶೇಷ ಧನ್ಯವಾದಗಳು ಎಂದು ಬರೆಯುವ ಮೂಲಕ ದೋಣಿ ವಿವಾರದ ವಿಡಿಯೋ ಹಂಚಿಕೊಂಡಿದ್ದಾರೆ. ಪ್ರಿಯಾಂಕಾ ಗಾಂಧಿ ವಾದ್ರಾ, ಮುಂದಿನ ವರ್ಷ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಮೊದಲು ಪಕ್ಷವನ್ನು ರಾಜ್ಯದಲ್ಲಿ ಬಲಪಡಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

Edited By : Nirmala Aralikatti
PublicNext

PublicNext

14/02/2021 03:35 pm

Cinque Terre

59.66 K

Cinque Terre

5

ಸಂಬಂಧಿತ ಸುದ್ದಿ