ಬೆಳಗಾವಿ: ಅಭಿವೃದ್ಧಿಯಲ್ಲಿ ಉತ್ತರಕರ್ನಾಟಕಕ್ಕೆ ಅನ್ಯಾಯವಾದ್ರೆ ಪ್ರತಿಭಟನೆ ಮಾಡಿಯೇ ಮಾಡುತ್ತೇನೆ. ನಾನು ಮಂತ್ರಿ ಆಗಿರಲಿ ಅಥವಾ ಆಗದೇ ಇರಲಿ ಎಂದು ಆಹಾರ ಸಚಿವ ಉಮೇಶ ಕತ್ತಿ ಮತ್ತೆ ಉತ್ತರಕರ್ನಾಟಕದ ಅಭಿವೃದ್ಧಿ ಮಂತ್ರ ಜಪಿಸಿದ್ದಾರೆ.
ಬೆಳಗಾವಿಯ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಉಮೇಶ ಕತ್ತಿ ಉತ್ತರಕರ್ನಾಟಕದಲ್ಲಿ ಏನು ಆಗಬೇಕೋ ಅದು ಆಗಲೇಬೇಕು. ಉತ್ತರಕರ್ನಾಟಕದಲ್ಲಿ ಆಗಬೇಕಿದ್ದ ಕೆಲಸ ಆಗದಿದ್ದಾಗ ನಾನು ಮಂತ್ರಿ ಇರಲಿ, ಬಿಡಲಿ ಪ್ರತಿಭಟನೆ ಮಾಡಿಯೇ ಮಾಡುತ್ತೇನೆ. ಯಾರೋ ಹೇಳ್ತಾರೆ ಕೇಳ್ತಾರೆ ಅಂತಾ ಪ್ರತಿಭಟನೆ ಮಾಡೊಲ್ಲ ಎಂ ಎಂದು ವರದಿಗಾರ ಪ್ರಶ್ನೆಗೆ ನಗು ನಗುತ್ತ ಉತ್ತರಿಸಿದರು.
ಇನ್ನು ಬಜೆಟ್ ಅಧಿವೇಶನ ಬೆಂಗಳೂರಿನಲ್ಲಿ ಆಗುತ್ತದೆ. ನಾನು ಈ ಭಾಗದ ಸಚಿವನಾಗಿರುವ ಕಾರಣ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಏನೇನು ಬೇಕೊ ಅದನೆಲ್ಲ ನನ್ನ ಈ ಬಾಗದ ಸಚಿವ ಮಿತ್ರರ ಜೊತೆ ಸೇರಿ ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೆನೆ. ಉತ್ತರ ಕರ್ನಾಟಕದ ಅಭಿವೃದ್ಧಿಗಾಗಿ ನಾನು ಸದಾ ಸಿದ್ದ ಎಂದು ಆಹಾರ ಸಚಿವ ಉಮೇಶ ಕತ್ತೆ ತಿಳಿಸಿದರು.
ಅನ್ನಭಾಗ್ಯ ಅಕ್ಕಿಯನ್ನ ಬಿಜೆಪಿ ಸರ್ಕಾರ ಕಡಿತಗೊಳಿಸಿದೆ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಉತ್ತರಿಸಿದ ಸಚಿವರು,
ಊಟ ಮಾಡಲು ಎನೂ ಬೇಕು ಅದನ್ನ ನಮ್ಮ ಸರ್ಕಾರ ಮಾಡಿದೆ.
ಅಕ್ಕಿ ಕಡಿತ ಮಾಡಿಲ್ಲ ಅಕ್ಕಿ ಕಡಿತದ ಜೊತೆಗೆ ಜೋಳ, ರಾಗಿ ಕೊಡುತ್ತಿದ್ದೇವೆ. ಜನರು ಪ್ರತಿಭಟನೆ ಮಾಡಿದ್ರೇ ಬೇಡಾ ಅಂದ್ರೆ ಮತ್ತೆ ಅಕ್ಕಿ ಕೊಡುತ್ತೇವೆ ಎಂದು ತಿಳಿಸಿದರು.
ಇದೆ ವೇಳೆ ಮಾತನಾಡಿದ ಅವರು ಜೂನ್‍ನಲ್ಲಿ ನಡೆಯುವ ಅಧಿವೇಶನ ಬೆಳಗಾವಿ ಸುವರ್ಣಸೌಧದಲ್ಲಿಯೇ ನಡೆಸಲಾಗುವುದು ಎಂದು ಇದೇ ವೇಳೆ ತಿಳಿಸಿದರು. ಆ ವೇಳೆ ನಮ್ಮ ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಯ ಬಗ್ಗೆ ಚರ್ಚೆ ನಮ್ಮ ಸರಕಾರ ಮಾಡುತ್ತೆ ಎಂದು ತಿಳಿಸಿದರು.
PublicNext
13/02/2021 06:16 pm