ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರೈತರ ಮುಂದೆ ಬ್ರಿಟೀಷರೇ ನಿಂತಿಲ್ಲ: ಇನ್ನು ಮೋದಿ ಯಾವ ಲೆಕ್ಕ?

ಜೈಪುರ: ಕೇಂದ್ರ ಸರ್ಕಾರ ಜಾರಿ ಮಾಡಿರುವ ಕೃಷಿ ಕಾನೂನುಗಳನ್ನು ವಾಪಸ್ ಪಡೆಯಲೇಬೇಕು. ರೈತರ ಮುಂದೆ ಬ್ರಿಟೀಷರೇ ನಿಂತಿಲ್ಲ ಇನ್ನು ಮೋದಿ ಯಾವ ಲೆಕ್ಕ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ರಾಜಸ್ಥಾನದ ಶ್ರೀ ಗಂಗಾನಗರ ಜಿಲ್ಲೆಯ ಪದಂಪೂರ್ ಪಟ್ಟಣದಲ್ಲಿ ಶುಕ್ರವಾರ ಕಾಂಗ್ರೆಸ್ ಹಮ್ಮಿಕೊಂಡಿದ್ದ ಎರಡನೇ ರೈತರ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶದ 40 ಪ್ರತಿಶತ ಜನರು ಕೃಷಿಯಲ್ಲಿ ತೊಡಗಿದ್ದಾರೆ. ಇದು ರಾಷ್ಟ್ರವನ್ನು ಪೋಷಿಸುತ್ತಿರುವ 'ಭಾರತ ಮಾತೆ'ಯ ವ್ಯವಹಾರವಾಗಿದೆ ಎಂದು ಹೇಳಿದರು. ಕೃಷಿ ಕಾನೂನುಗಳು ರೈತರಿಗಷ್ಟೇ ಸಂಬಂಧಿಸಿದ್ದಲ್ಲ. ಇದರ ಪರಿಣಾಮ ಕಾರ್ಮಿಕರು, ಸಣ್ಣ ಮತ್ತು ಮಧ್ಯಮ ಉದ್ಯಮಿಗಳ ಮೇಲೂ ಆಗಲಿದೆ ಎಂದು ರಾಹುಲ್ ಗಾಂಧಿ ಅಭಿಪ್ರಾಯ ಪಟ್ಟಿದ್ದಾರೆ.

Edited By : Nagaraj Tulugeri
PublicNext

PublicNext

13/02/2021 07:49 am

Cinque Terre

75.56 K

Cinque Terre

43

ಸಂಬಂಧಿತ ಸುದ್ದಿ