ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋವಿಡ್ ಲಸಿಕೆ ನೀಡುವಂತೆ ಮೋದಿಗೆ ಕೆನಡಾ ಪ್ರಧಾನಿ ಮನವಿ

ನವದೆಹಲಿ: ಭಾರತದ ದೇಶದ ರೈತರ ಪ್ರತಿಭಟನೆ ಬೆಂಬಲಿಸಿದ್ದ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಟೀಕೆಗೆ ಗುರಿಯಾಗಿದ್ದರು. ಆ ಬಗ್ಗೆ ಪರ-ವಿರೋಧದ ಚರ್ಚೆಯೂ ಆಗಿತ್ತು. ಈಗ ಜಸ್ಟಿನ ಟ್ರುಡೋ ಅವರು ಕೋವಿಡ್ ಲಸಿಕೆ ಪೂರೈಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ.

ಈ ಸಂಬಂಧ ಕೆನಡಾ ಪ್ರಧಾನಿಗೆ ಧನ್ಯವಾದ ತಿಳಿಸಿದ ಮೋದಿ, ನನ್ನ ಸ್ನೇಹಿತ ಜಸ್ಟಿನ್ ಟ್ರುಡೊ ಅವರಿಂದ ಕರೆ ಸ್ವೀಕರಿಸಲು ಸಂತೋಷವಾಗಿದೆ. ಕೆನಡಾ ಕೇಳಿದಷ್ಟು ಕೋವಿಡ್ ಲಸಿಕೆಗಳನ್ನು ಪೂರೈಸಲು ಭಾರತ ಪ್ರಯತ್ನಿಸಲಿದೆ ಎಂದು ಭರವಸೆ ನೀಡಿದ್ದೇನೆ. ಹವಾಮಾನ ಬದಲಾವಣೆ ಮತ್ತು ಜಾಗತಿಕ ಆರ್ಥಿಕ ಚೇತರಿಕೆಯಂತಹ ಇತರ ಪ್ರಮುಖ ವಿಷಯಗಳ ಬಗ್ಗೆ ಸಹಯೋಗವನ್ನು ಮುಂದುವರಿಸಲು ನಾವು ಒಪ್ಪಿದ್ದೇವೆ ಎಂದು ಟ್ವೀಟ್‌ ಮಾಡಿದ್ದಾರೆ.

Edited By : Nagaraj Tulugeri
PublicNext

PublicNext

11/02/2021 11:59 am

Cinque Terre

67.31 K

Cinque Terre

8

ಸಂಬಂಧಿತ ಸುದ್ದಿ