ಬೆಳಗಾವಿ: 'ಬೆಳಗಾವಿ, ನಿಪ್ಪಾಣಿ, ಕಾರವಾರ ಸೇರಿ ಸಂಯುಕ್ತ ಮಹಾರಾಷ್ಟ್ರ ಆಗುವುದು’ ಎಂಬ ಪೋಸ್ಟರ್ ಅನ್ನು ಕೆಲ ಕಿಡಿಗೇಡಿಗಳು ಬೆಳಗಾವಿ–ಪುಣೆ ಮಾರ್ಗದಲ್ಲಿ ಸಂಚರಿಸುವ ನಮ್ಮ ರಾಜ್ಯದ ಬಸ್ ಮೇಲೆ ಅಂಟಿಸಿದ್ದಾರೆ.
ಮಹಾರಾಷ್ಟ್ರದ ಕಿಡಿಗೇಡಿಗಳು ಮರಾಠಿಯಲ್ಲಿ ಬರೆದಿರುವ ಪೋಸ್ಟರ್ ಅನ್ನು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಹಿಂಬದಿಯಲ್ಲಿ ಅಂಟಿಸಿರುವುದು ಶುಕ್ರವಾರ ಬೆಳಕಿಗೆ ಬಂದಿದೆ. ‘ರಾಷ್ಟ್ರವಾದಿ ಕಾಂಗ್ರೆಸ್ ಪಾರ್ಟಿ, ಪುಣೆ’ ಹೆಸರು ಆ ಪೋಸ್ಟರ್ ಮೇಲಿದೆ. ಇನ್ನೂ ಕೆಲವು ಬಸ್‌ಗಳ ಮೇಲೆ ಈ ರೀತಿಯ ಪೋಸ್ಟರ್ ಹಾಕಲಾಗಿದೆ ಎನ್ನಲಾಗುತ್ತಿದೆ. ಪೋಸ್ಟರ್‌ನ ಫೋಟೊಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ.
PublicNext
29/01/2021 03:38 pm