ಕೊಪ್ಪಳ: ಕೇಂದ್ರ ಸರ್ಕಾರದ ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ತೀವ್ರ ಹಿಂಸಾಚಾರಕ್ಕೆ ತಿರುಗಿದೆ. ರಾಷ್ಟ್ರಧ್ವಜ ಹಾರಾಡಬೇಕಾದ ದೆಹಲಿಯ ಕೆಂಪುಕೋಟೆ ಮೇಲೆ ರೈತರ ಧ್ವಜ ಹಾರಾಡಿದೆ. ಈ ಎಲ್ಲ ಘಟನಾವಳಿ ಬಗ್ಗೆ ಕೊಪ್ಪಳದಲ್ಲಿ ಕೃಷಿ ಸಚಿವ ಬಿ.ಸಿ. ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ. "ದೆಹಲಿಯಲ್ಲಿ ಧರಣಿ ಮಾಡುವ ರೈತರು ಭಯೋತ್ಪಾದಕರು" ಎಂದು ಜರಿದಿದಿದ್ದಾರೆ.
ದೆಹಲಿಯಲ್ಲಿ ಪ್ರತಿಭಟನೆ ಮಾಡುವ ರೈತರು ಸಂಪೂರ್ಣ ಭಯೋತ್ಪಾದಕರು. ಧರಣಿ ನಿರತ ರೈತರಿಗೆ ಪಾಕಿಸ್ತಾನ ಹಾಗೂ ಕಾಂಗ್ರೆಸ್ನವರ ಬೆಂಬಲವಿದೆ. ರೈತರು ಎಂದಿಗೂ ಕಾನೂನು ಕೈಗೆ ತೆಗೆದುಕೊಂಡವರಲ್ಲ. ಆದರೆ, ದೆಹಲಿ ರೈತ ಪ್ರತಿಭಟನಾಕಾರರು ಕೆಂಪುಕೋಟೆ ಬಳಿ ಹೋಗಿ ಬಾವುಟ ಹಾರಿಸಿದ್ದಾರೆ. ಇದನ್ನು ನೋಡಿದಾಗ ಇವರಿಗೆ ಭಯೋತ್ಪಾದಕರ ಬೆಂಬಲ ಇರುವುದು ಅರ್ಥವಾಗುತ್ತದೆ. ಇದೊಂದು ಭಯೋತ್ಪಾದಕ ಕೃತ್ಯ ಎನ್ನುವ ಮೂಲಕ ಸಚಿವ ಬಿ.ಸಿ ಪಾಟೀಲ್ ಮತ್ತೊಮ್ಮೆ ರೈತರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
PublicNext
26/01/2021 04:19 pm