ಮೈಸೂರು: ಕುರುಬ ಸಮಾಜದ ಪಾದಯಾತ್ರೆಗೆ ಆರ್‌ಎಸ್ಎಸ್ ಹಣ ನೀಡಿದೆ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಕ್ಕೆ ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಕಿಡಿಕಾರಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ನೀವು ಹೀಗೆ ಮಾತು ಮುಂದುವರಿಸಿದರೆ ಸಮಾಜ ನಿಮ್ಮನ್ನು ಬಹಿಷ್ಕರಿಸುತ್ತದೆ. ಇಡೀ ಸಮುದಾಯಕ್ಕೆ ನೀವು ಅವಮಾನಿಸಿದ್ದಾರೆ. ಸಿದ್ದರಾಮಯ್ಯ ಅವರ ಆರೋಪ ಕೇಳಿ ನನಗೆ ಬಹಳ ನೋವಾಗಿದೆ. ಮಠದ ಮೇಲೆ ಇಂತಹ ದೊಡ್ಡ ಆರೋಪ ಸರಿಯಲ್ಲ. ಮಠದ ಧಾರ್ಮಿಕ ಸಂಘಟನೆಯಿಂದಲೇ ತಾವು ಸಿಎಂ ಆಗಿದ್ದು ಎನ್ನುವುದನ್ನು ಸಿದ್ದರಾಮಯ್ಯ ಮರೆತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ಅವರಿಗೆ ಮಠನೂ ಗೊತ್ತಿಲ್ಲ, ಸ್ವಾಮೀಜಿನೂ ಗೊತ್ತಿಲ್ಲ. ಮಠದ ಬಗ್ಗೆ ಗೌರವವಿಲ್ಲ. ಅವರು ನಮ್ಮ ಸ್ವಾಮಿಗಳ ಮಾನ ಹರಾಜು ಹಾಕುತ್ತಿದ್ದಾರೆ. ನಮ್ಮ ಬಗ್ಗೆ ನೀವು ಹೇಳಿ ಆದರೆ ಸ್ವಾಮೀಜಿ ಬಗ್ಗೆ ಮಾತನಾಡಬೇಡಿ. ನೀವು ತುಂಬಾ ಚಿಕ್ಕವರಾಗಿದ್ದೀರಾ ಸಿದ್ದರಾಮಯ್ಯ ಎಂದು ಕಿಡಿಕಾರಿದರು.
PublicNext
20/01/2021 04:06 pm