ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರೈತರ ಮೇಲೆ ಕಾಂಗ್ರೆಸ್ ಸರ್ಕಾರದಲ್ಲಿ ದಬ್ಬಾಳಿಕೆ: ಬಿಜೆಪಿಯಿಂದ ಮತ್ತೊಮ್ಮೆ ವಿಡಿಯೋ ಬಿಡುಗಡೆ

ಬೆಂಗಳೂರು: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ನೀತಿಗಳನ್ನ ವಿರೋಧಿಸಿ ಕಾಂಗ್ರೆಸ್ ಇಂದು ನಗರದಲ್ಲಿ ಬೃಹತ್ ರ‍್ಯಾಲಿ ನಡೆಸಿದೆ. ಅಷ್ಟೇ ಅಲ್ಲದೆ ರೈತ ಪ್ರಧಾನಿ ಮೋದಿ ನೇತೃತ್ವದ ಸರ್ಕಾರವನ್ನು 'ರೈತ ವಿರೋಧಿ ಸರ್ಕಾರ' ಎಂದು ಟೀಕಿಸಿದೆ. ಈ ವಿಚಾರವಾಗಿ ಬಿಜೆಪಿ ಹಳೆ ವಿಡಿಯೋ ಮೂಲಕ ಪ್ರತ್ಯುತ್ತರ ನೀಡಿದೆ.

ಹೌದು. ರಾಜ್ಯ ಬಿಜೆಪಿ ವಿಡಿಯೋ ಟ್ವೀಟ್ ಮಾಡಿ, ''ಧಾರವಾಡದ ನವಲಗುಂದ ತಾಲ್ಲೂಕಿನ ಯಮನೂರು ರೈತರ ಮೇಲೆ ಯಮನಂತೆ ಎರಗಿ ಮಾರಣಾಂತಿಕವಾಗಿ ಹಲ್ಲೆ ನಡೆಸಲು ಕರ್ನಾಟಕ ಕಾಂಗ್ರೆಸ್‌ ಕುಮ್ಮಕ್ಕು ನೀಡಿತ್ತು. ಅದೇ ರೈತ ವಿರೋಧಿ ಕಾಂಗ್ರೆಸ್ ಇಂದು ಬೂಟಾಟಿಕೆ ಪ್ರದರ್ಶನ ಮಾಡುತ್ತಿದೆ. ರಾಜಭವನ ಚಲೋ ಎಂಬುದು ಕಾಂಗ್ರೆಸ್‌ ಅಸ್ತಿತ್ವದ ಹೋರಾಟವೇ ಹೊರತು ರೈತಪರ ಹೋರಾಟವಲ್ಲ'' ಎಂದು ಕುಟುಕಿದೆ.

ಈ ಹಿಂದೆ ಆಗಿದ್ದೇನು?:

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ 2016ರ ಆಗಸ್ಟ್‌ ತಿಂಗಳಿನಲ್ಲಿ ನಡೆದ ಘಟನೆ ಇದಾಗಿದೆ. ಯಮನೂರಿನಲ್ಲಿ ಮಹದಾಯಿ ಹೋರಾಟಗಾರರ ಮನೆಗಳಿಗೆ ನುಗ್ಗಿದ ಪೊಲೀಸರು ಮಹಿಳೆಯರು ಮತ್ತು ವೃದ್ಧರ ಮೇಲೆ ಮನಬಂದಂತೆ ಲಾಠಿ ಬೀಸಿದ ಅಮಾನವೀಯತೆ ಮೆರೆದಿದ್ದರು. ಇದಾಗ ಕೆಲವೇ ದಿನಗಳಲ್ಲಿ ಕೆಲ ರೈತರನ್ನು ಬಂಧಿಸಿ ಠಾಣೆಗೆ ಕರೆದೊಯ್ಯಲಾಗಿತ್ತು. ಈ ವೇಳೆ ಅವರ ಮೇಲೆ ಲಾಠಿ ಪ್ರಹಾರ ನಡೆಸಲಾಗಿತ್ತು.

ಇಂದು ಕಾಂಗ್ರೆಸ್‌ ಜಾಥಾ:

ಕಾಂಗ್ರೆಸ್ ಪಕ್ಷದ ರೈತ ಘಟಕದಿಂದ ಆಯೋಜಿಸಲಾಗಿರುವ ಇಂದಿನ ಜಾಥಾದಲ್ಲಿ 12 ಜಿಲ್ಲೆಗಳಿಂದ ರೈತರು ನಗರಕ್ಕೆ ಆಗಮಿಸಿ ಪಾಲ್ಗೊಂಡಿದ್ದಾರೆ. ಫ್ರೀಡಂ ಪಾರ್ಕ್​ವರೆಗೂ ಪ್ರತಿಭಟನಾ ಮೆರವಣಿಗೆ ಸಾಗಿ ಸೇರಲಿದೆ. ಅಲ್ಲಿ ಬೃಹತ್ ಸಮಾವೇಶವಾಗಲಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಮೆಜೆಸ್ಟಿಕ್ ಬಳಿ ರ್ಯಾಲಿಗೆ ಚಾಲನೆ ನೀಡಿದರು. ಕಾಂಗ್ರೆಸ್ ಪಕ್ಷದ ಕಿಸಾನ್ ಘಟಕ ಮಾತ್ರವಲ್ಲದೆ ಎನ್​ಎಸ್​ಯುಐ, ಸೇವಾದಳ ಸೇರಿದಂತೆ ಕಾಂಗ್ರೆಸ್ ಪಕ್ಷದ ಇತರ ಘಟಕಗಳೂ ಈ ಪ್ರತಿಭಟನೆಯಲ್ಲಿ ಭಾಗಿಯಾಗಿವೆ.

Edited By : Vijay Kumar
PublicNext

PublicNext

20/01/2021 01:05 pm

Cinque Terre

111.37 K

Cinque Terre

31

ಸಂಬಂಧಿತ ಸುದ್ದಿ