ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜಯಲಲಿತಾ ಆಪ್ತೆ ಶಶಿಕಲಾ ಬಂಧನ ಮುಕ್ತಿ ದಿನಾಂಕ ನಿಗದಿ

ಬೆಂಗಳೂರು : ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರದ ಅತಿಥಿಯಾಗಿದ್ದ ದಿ.ಜಯಲಲಿತಾ ಆಪ್ತೆ ಶಿಶಿಕಲಾಗೆ ಕೊನೆಗೂ ಕಾರಾಗೃಹದಿಂದ ಮುಕ್ತಿ ದೊರೆಯುವ ಕಾಲ ಸಮೀಪಿಸಿದೆ.

ಈ ಕ್ಷಣಕ್ಕೂ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಎಐಎಡಿಎಂಕೆಯ ಮಾಜಿ ನಾಯಕಿ ವಿ.ಕೆ.ಶಶಿಕಲಾ ಇದೇ ಜ.27ರಂದು ಜೈಲಿನಿಂದ ಬಿಡುಗಡೆ ಆಗಲಿದ್ದಾರೆ.

ಶಶಿಕಲಾ, ಇಳವರಸಿ ಮತ್ತು ಮತ್ತೊಬ್ಬ ಸಂಬಂಧಿ ವಿ.ಎನ್ ಸುಧಾಕರ್ 2017ರ ಫೆಬ್ರವರಿಯಿಂದ ಜೈಲುವಾಸ ಅನುಭವಿಸುತ್ತಿದ್ದಾರೆ. ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಜೈಲು ಸೇರಿರುವ ಶಶಿಕಲಾ ಮತ್ತು ಇಳವರಸಿ ಜೈಲಿನಲ್ಲಿ ಕಳೆದಿರುವ ದಿನಗಳ ಆಧಾರದ ಮೇಲೆ ವ್ಯತ್ಯಾಸ ಕಂಡು ಬಂದಿದೆ ಎಂದು ಮೂಲಗಳು ತಿಳಿಸಿವೆ.

ಲೆಕ್ಕಾಚಾರದ ಪ್ರಕಾರ, ಜ.27ರಂದು ಶಶಿಕಲಾ ಅವರ ಜೈಲು ಶಿಕ್ಷೆ ಪೂರ್ಣಗೊಳ್ಳುತ್ತದೆ. ಶಶಿಕಲಾ ಮತ್ತು ಇಳವರಸಿ ಇಬ್ಬರು ನ್ಯಾಯಾಲಯಕ್ಕೆ ಈಗಾಗಲೇ 10 ಕೋಟಿ ದಂಡ ಕಟ್ಟಿದ್ದಾರೆ, ಆದರೆ ಸುಧಾಕರನ್ ಇನ್ನೂ ದಂಡದ ಮೊತ್ತ ಪಾವತಿಸಿಲ್ಲ ಎಂದು ಮೂಲಗಳು ತಿಳಿಸಿವೆ.

Edited By : Nirmala Aralikatti
PublicNext

PublicNext

19/01/2021 09:29 pm

Cinque Terre

53.95 K

Cinque Terre

1

ಸಂಬಂಧಿತ ಸುದ್ದಿ