ಕಾರವಾರ: ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಉದ್ಧಟತನದ ಟ್ವೀಟ್ ಕುರಿತು ಪ್ರತಿಕ್ರಿಯಿಸಲು ಉತ್ತರ ಕನ್ನಡ ಸಂಸದ ಅನಂತ್ ಕುಮಾರ್ ಹೆಗಡೆ ನಿರಾಕರಿಸಿದ್ದಾರೆ. ಕಾರವಾರಕ್ಕೆ ಆಗಮಿಸಿದ ವೇಳೆ ಮಾಧ್ಯಮ ಪ್ರತಿನಿಧಿಗಳು ಉದ್ಧವ್ ಠಾಕ್ರೆ ಟ್ವೀಟ್ ವಿಚಾರವನ್ನು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಯಾವುದೇ ಪ್ರತಿಕ್ರಿಯೆ ನೀಡದೇ ಕೇವಲ ಧನ್ಯವಾದ ಹೇಳಿ ತೆರಳಿದ್ದಾರೆ.
ಉದ್ಧವ್ ಠಾಕ್ರೆ ಮರಾಠಿ ಭಾಷಿಕರಿರುವ ಕರ್ನಾಟಕದ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ಳುವ ಮಾತುಗಳನ್ನಾಡಿದ್ದಾರೆ. ಇದಕ್ಕೆ ಕನ್ನಡ ಪರ ಸಂಘಟನೆಗಳು ರಾಜ್ಯದಾದ್ಯಂತ ಆಕ್ರೋಶ ವ್ಯಕ್ತಪಡಿಸಿವೆ.
ಉತ್ತರಕನ್ನಡ ಜಿಲ್ಲೆಯೂ ಗಡಿ ಭಾಗದಲ್ಲಿದ್ದರೂ ಸಹ ಅನಂತ್ ಕುಮಾರ್ ಹೆಗಡೆ ಪ್ರತಿಕ್ರಿಯಿಸಿಲ್ಲ. ಅನಂತ್ ಕುಮಾರ್, ಗಡಿ ವಿಚಾರದಲ್ಲಿ ಮಹಾರಾಷ್ಟ್ರ ಪದೇಪದೆ ಕ್ಯಾತೆ ತೆಗೆದ್ರೂ ಸಹ ಜಿಲ್ಲೆಯ ಪರ ಯಾವುದೇ ಹೇಳಿಕೆ ನೀಡದೇ, ವಿಚಾರ ಮಾಡೋದಾಗಿ ಹೇಳಿ ತೆರಳಿದ್ದಾರೆ.
PublicNext
18/01/2021 07:31 pm