ವಿಜಯಪುರ: ಬೆಳಗಾವಿಯ ಒಂದಿಂಚು ನೆಲವನ್ನೂ ಬಿಟ್ಟು ಕೊಡುವ ಮಾತೇ ಇಲ್ಲವೆಂದು ಡಿಸಿಎಂ ಗೋವಿಂದ ಕಾರಜೋಳ ತಿಳಿಸಿದ್ದಾರೆ. ಜಿಲ್ಲೆಯ ಚಡಚಣ ತಾಲೂಕಿನ ಹತ್ತಳ್ಳಿಯಲ್ಲಿ ಬೋರಿ ಹಳ್ಳದ ಬ್ಯಾರೇಜ್ ನಿರ್ಮಾಣಕ್ಕೆ ಪೂಜೆ ಸಲ್ಲಿಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮದು ಒಕ್ಕೂಟ ವ್ಯವಸ್ಥೆ ಇದೆ. ಸಿಎಂ ಆದವರಿಗೆ ಒಕ್ಕೂಟ ವ್ಯವಸ್ಥೆಯ ಪ್ರಜ್ಞೆ ಇರಬೇಕು. ಕಾಶ್ಮೀರ ಹಾಗೂ ಪಾಕಿಸ್ತಾನ ರೀತಿ ಉದ್ಧಟತನದ ಹೇಳಿಕೆ ನೀಡುವುದು ಸರಿಯಲ್ಲ. ಸಂವಿಧಾನದ ಚೌಕಟ್ಟಿನಲ್ಲಿ ಸಿಎಂ ಆದವರು ಮಾತನಾಡಬೇಕು ಎಂದು ಬುದ್ಧಿವಾದ ಹೇಳಿದರು.
ದೇಶದಲ್ಲಿ ಎಲ್ಲ ಭಾಷೆ ಕಲಿತು ಮಾತನಾಡಬೇಕು. ಹಾದಿ-ಬೀದಿಯಲ್ಲಿ ನಿಂತು ಮಾತನಾಡುವುದು ಸರಿಯಲ್ಲ. ನಮ್ಮ ನೆಲ-ಜಲ ಪ್ರಶ್ನೆ ಬಂದಾಗ ರಾಜಿ ಪ್ರಶ್ನೆಯೇ ಇಲ್ಲ. 2008 ಮತ್ತು 2013ರ ಅವಧಿಯಲ್ಲಿ ಬಿಜೆಪಿ ಸರ್ಕಾರವಿದ್ದಾಗ ಬೆಳಗಾವಿಯಲ್ಲಿ ವಿಶ್ವ ಕನ್ನಡ ಸಮ್ಮೇಳನ ಆಯೋಜಿಸಲಾಗಿತ್ತು. ಆಗ ಮರಾಠಿಗರು ತುಂಬಾ ಸಹಕಾರದಿಂದ ಸಹೋದರರಂತೆ ಕನ್ನಡಾಂಬೆ ಹಬ್ಬವನ್ನು ಆಚರಿಸಿದ್ದರು ಎಂದು ಕಾರಜೋಳ ಹೇಳಿದ್ರು.
PublicNext
18/01/2021 07:17 pm