ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಿಡಿ ಹೆಸರಲ್ಲಿ ರಾಜಕೀಯ ಮಾಡಿ ಉಪಯೋಗ ಇಲ್ಲ: ಎಂಟಿಬಿ ನಾಗರಾಜ್

ಚಿತ್ರದುರ್ಗ: ಯಾವ ಶಾಸಕರ ಬಳಿ ಯಾವ ಸಿಡಿ ಇದೆಯೋ ಇಲ್ಲ ಗೊತ್ತಿಲ್ಲ, ಅಂತೆ-ಕಂತೆಗಳನ್ನೇ ಮೀಡಿಯಾಗಳ ಮುಂದೆ ಹೇಳಿದ್ದಾರೆಂದು ಎಂದು ಸಚಿವ ಎಂಟಿಬಿ ನಾಗರಾಜ್ ಹೇಳಿದರು. ಸಚಿವರಾದ ಮೇಲೆ ಮೊದಲ ಬಾರಿಗೆ ಕೋಟೆನಾಡಿಗೆ ಆಗಮಿಸಿ ಮಾತಾನಾಡಿದ ಸಚಿವ ಎಂಟಿಬಿ, ಸಿಡಿ ಇದೆ ಎಂದು ಬಿಜೆಪಿ ನಾಯಕರು ಅಥವಾ ಬೇರೆ ಪಕ್ಷದ ನಾಯಕರು ಹೇಳುತ್ತಾರೋ ಗೊತ್ತಿಲ್ಲ. ಸಿಡಿ ಇದ್ರೆ ಬಿಡುಗಡೆ ಮಾಡಲಿ,

ಸತ್ಯಾಂಶ ಎಲ್ಲರಿಗೂ ತಿಳಿಯಲಿ.

ಸಿಡಿ ಹೆಸರು ಹೇಳಿಕೊಂಡು ರಾಜಕೀಯ ಮಾಡಿ ಪ್ರಯೋಜನವಿಲ್ಲ ಎಂದರು. ಸಿಡಿ ಹೆಸರು ಹೇಳಿಕೊಂಡು ಮಂತ್ರಿಯಾದವರು, ಸಿಡಿ ಇಟ್ಕೊಂಡು ಬೆದರಿಕೆ ಹಾಕುತ್ತಿರುವ ಬಗ್ಗೆ ನನಗೆ ಮಾಹಿತಿಯಿಲ್ಲ. ಇನ್ನು ಸಚಿವ ಯೋಗೇಶ್ವರ ನನ್ನ ಬಳಿ ಆಸ್ತಿ ಅಡವಿಟ್ಟು ಸಾಲ ಪಡೆದುಕೊಂಡಿಲ್ಲ. ಜಾರಕಿಹೊಳಿ ಯಾವ ಕಾರಣಕ್ಕೆ ಹೀಗೆ ಹೇಳುತ್ತೀರಿ ಎಂದು ಕೇಳಿದ್ದೇನೆ. ಸತ್ಯಾಸತ್ಯತೆ ಇದ್ದರೆ ಮಾತಾಡಿ ಎಂದು ಹೇಳಿರುವೆ ಎಂದರು.

Edited By : Nagaraj Tulugeri
PublicNext

PublicNext

15/01/2021 04:12 pm

Cinque Terre

51.48 K

Cinque Terre

2

ಸಂಬಂಧಿತ ಸುದ್ದಿ