ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕತ್ತಿಗೆ ಸಚಿವ ಸ್ಥಾನ: ಒಂದೇ ಕಲ್ಲಲ್ಲಿ ಹಲವು ಹಣ್ಣು ಹೊಡೆದ ಸಿಎಂ

ಬೆಂಗಳೂರು: ಅಂತೂ ಇಂತೂ ಮುಖ್ಯಮಂತ್ರಿ ಯಡಿಯೂರಪ್ಪನವರ ಸಂಪುಟ ವಿಸ್ತರಣೆಯಾಗಿದೆ. ಕಳೆದ ಹಲವು ತಿಂಗಳಿನಿಂದ ಸಂಪುಟ ವಿಸ್ತರಣೆ ಒತ್ತಡಕ್ಕೆ ಸಿಲುಕಿದ್ದ ಸಿಎಂ ಯಡಿಯೂರಪ್ಪ ಅವರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಈ ನಡುವೆ ಮಂತ್ರಿ ಪಟ್ಟದ ಆಕಾಂಕ್ಷಿಗಳಾಗಿದ್ದವರ ಅಸಮಾಧಾನ ಹೊಗೆ ಮತ್ತಷ್ಟು ದಟ್ಟವಾಗಿದೆ. ಈ ಮಧ್ಯೆ ಹುಕ್ಕೇರಿ ಶಾಸಕ ಉಮೇಶ್‌ ಕತ್ತಿ ಅವರನ್ನು ಸಚಿವರನ್ನಾಗಿ ಮಾಡುವ ಮೂಲಕ ಸಿಎಂ ಯಡಿಯೂರಪ್ಪನವರು ಒಂದೇ ಕಲ್ಲಿಗೆ ಹಲವು ಹಣ್ಣುಗಳನ್ನು ಉದುರಿಸಿದ್ದಾರೆ.

ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ಉಮೇಶ್‌ ಕತ್ತಿ ಈ ಹಿಂದೆ ತಮ್ಮನ್ನು ಸಂಪುಟಕ್ಕೆ ಸೇರಿಸದೇ ಇದ್ದಿದ್ದಕ್ಕೆ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಅಲ್ಲದೇ ತಮ್ಮ ನಿವಾಸದಲ್ಲಿ ಬಸನಗೌಡ ಪಾಟೀಲ್‌ ಯತ್ನಾಳ್‌ ಸಹಿತ ಉತ್ತರ ಕನ್ನಡದ ಅತೃಪ್ತ ಶಾಸಕರ ಸಭೆ ನಡೆಸಿ ಬಂಡಾಯವೇಳುವ ಸೂಚನೆ ನೀಡಿದ್ದರು. ಯತ್ನಾಳ್‌ ಜತೆ ಸೇರಿಕೊಂಡು ಬಿಎಸ್‌ವೈ ಸರ್ಕಾರದ ವಿರುದ್ಧ ಆಗಾಗ್ಗೆ ಗುಟುರು ಹಾಕುತ್ತಿದ್ದರು. ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯದ ಕೂಗು ಮೊಳಗಿಸುವ ಮೂಲಕ ಸರ್ಕಾರವನ್ನು ತಿವಿಯುತ್ತಿದ್ದರು. ಈಗ ಸಚಿವ ಸ್ಥಾನ ನೀಡುವ ಮೂಲಕ ಉಮೇಶ್ ಕತ್ತಿಯ ಬೀಸುಗತ್ತಿಯಿಂದ ಸಿಎಂ ತಪ್ಪಿಸಿಕೊಂಡಿದ್ದಾರೆ.

ಈಗ ಮಂತ್ರಿಗಿರಿ ಸಿಕ್ಕಿದ್ದರಿಂದ ಮತ್ತೆ ಯತ್ನಾಳ್‌ ಜತೆ ಸೇರಿಕೊಂಡು ಮುಖ್ಯಮಂತ್ರಿಗಳ ಕೆಂಗಣ್ಣಿಗೆ ಕತ್ತಿ ಗುರಿಯಾಗಲಾರರು. ಕತ್ತಿಯವರನ್ನೇ ಪ್ರಮುಖ ಅಸ್ತ್ರವಾಗಿಟ್ಟುಕೊಂಡು ಮುಖ್ಯಮಂತ್ರಿ ವಿರುದ್ಧ ಆಕ್ರೋಶ ವ್ಯಕ್ತ ಪಡಿಸುತ್ತಿದ್ದ ಯತ್ನಾಳ್ ಇನ್ನು ಮುಂದೆ ಒಂಟಿಯಾಗಲಿದ್ದಾರೆ. ಜತೆಗೆ ಮುಂಬೈ ಕರ್ನಾಟಕದ ಭಾಗದ ಅತೃಪ್ತ ಶಾಸಕರ ನಾಯಕತ್ವ ವಹಿಸಿದ್ದ ಕತ್ತಿಯನ್ನು ಸಚಿವರನ್ನಾಗಿ ಮಾಡಿ, ಅತೃಪ್ತರ ಗುಂಪಿನ ಒಗ್ಗಟ್ಟು ಮುರಿಯುವಲ್ಲಿ ಸಿಎಂ ಯಡಿಯೂರಪ್ಪ ಸಕ್ಸಸ್ ಆಗಿದ್ದಾರೆ. ಇನ್ನೊಂದೆಡೆ ಉತ್ತರ ಕರ್ನಾಟಕದ ಶಾಸಕರನ್ನು ಕಡೆಗಣಿಸಲಾಗುತ್ತಿದೆ ಎನ್ನುವ ಮಾತಿಗೆ ಈಗ ಪೂರ್ಣವಿರಾಮ ಹಾಕಿದಂತಾಗಿದೆ.

Edited By : Nagaraj Tulugeri
PublicNext

PublicNext

13/01/2021 07:00 pm

Cinque Terre

52.43 K

Cinque Terre

1

ಸಂಬಂಧಿತ ಸುದ್ದಿ