ಬೆಂಗಳೂರು: ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ ಎಂದ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಕಣ್ಣೀರಿಟ್ಟಿದ್ದಾರೆ.
ಸಿಎಂ ಮನೆ ಮುಂದೆ ಮಾಧ್ಯಮಗಳೊಂದಿಗೆ ಮಾತನಾಡಿದ ರೇಣುಕಾಚಾರ್ಯ ನಾನು ನೇರ, ನಿಷ್ಟುರವಾಗಿ ಮಾತಾಡ್ತೇನೆ. ನನ್ನ ಕ್ಷೇತ್ರದಲ್ಲಿ ಕೆಲಸ ಮಾಡ್ತೇನೆ. ಅದೇ ನನಗೆ ಮುಳುವಾಗಿ ಕಾಡಿದೆ. ನಾನು ಮಂತ್ರಿ ಸ್ಥಾನಕ್ಕಾಗಿ ಲಾಬಿ ಮಾಡಬಹುದಿತ್ತು. ಕೆಲಸ ಮಾಡಿದವರು ಮನೆಯಲ್ಲಿದ್ದಾರೆ. ಲಾಬಿ ಮಾಡಿದವರು ಮಂತ್ರಿ ಆಗ್ತಿದ್ದಾರೆ ಎಂದು ರೇಣುಕಾಚಾರ್ಯ ನೋವಿನಿಂದ ಮಾತಾಡಿದ್ರು.
ನಾನು ಸಚಿವ ಸ್ಥಾನಕ್ಕೆ ಅರ್ಜಿ ಹಾಕಿಲ್ಲ. ಯಾರ ಮುಂದೆಯೂ ಹೇಳಿಲ್ಲ. ಮಂತ್ರಿ ಆಗೋಕೆ ಅರ್ಹತೆ ಬೇಕು. ನಾನು ಜನರಲ್ ಕೋಟಾ ಹೀಗಾಗಿ ಮಂತ್ರಿ ಆಗಿಲ್ಲ. ನಾನು ಅಸಮರ್ಥ. ಸರ್ಕಾರ ಕೇವಲ ಬೆಂಗಳೂರು ಹಾಗೂ ಬೆಳಗಾವಿಗೆ ಸೀಮಿತವಾಗಿದೆ ಎಂದರು.
PublicNext
13/01/2021 12:05 pm