ಚುನಾವಣೆಯಲ್ಲಿ ಸೋತ ದಿನ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆಂಬಲಿಗರಂತೆಯೆ ಭಾರತೀಯ ಜನತಾ ಪಕ್ಷವೂ ವರ್ತಿಸುತ್ತದೆ ಎಂದು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
“ನೀವು ಅವರನ್ನು ನೋಡಲಿಲ್ಲವೇ? ಸೋತರೂ ನಾನೇ ಗೆದ್ದಿದ್ದೇನೆ ಎಂದು ಟ್ರಂಪ್ ಹೇಳುತ್ತಲೇ ಇದ್ದಾರೆ. ಯಾವಾಗ ಬಿಜೆಪಿ ಸೋಲುತ್ತದೆಯೋ ಅಂದು ’ನಾವು ಗೆದ್ದಿದ್ದೇವೆ, ನಾವು ಗೆದ್ದಿದ್ದೇವೆ’ ಎಂದು ಹೇಳುತ್ತದೆ, ಇದರಲ್ಲಿ ಯಾವುದೇ ವ್ಯತ್ಯಾಸವಿಲ್ಲ” ಎಂದು ನಾಡಿಯಾ ಜಿಲ್ಲೆಯಲ್ಲಿ ನಡೆದ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
“ಜೀವನ ಅಷ್ಟು ಸುಲಭವಲ್ಲ ನನ್ನ ಸಹೋದರ. ನೀವು ಯಶಸ್ಸನ್ನು ಸಾಧಿಸಲು ಬಯಸಿದರೆ ಬೀದಿಗಿಳಿಯಬೇಕಾಗುತ್ತದೆ. ಆದರೆ ನಿಮ್ಮ ಬಟ್ಟೆಗಳ ಮೇಲೆ ಒಂದು ಕಳೆಯು ಇಲ್ಲ” ಎಂದು ಅವರು ಬಿಜೆಪಿ ನಾಯಕರನ್ನು ಹಂಗಿಸಿದರು.
ಬಿಜೆಪಿಯನ್ನು ಜಂಕ್ ಪಾರ್ಟಿ ಎಂದು ಕರೆದ ಅವರು, “ಬಿಜೆಪಿ ನನ್ನ ಬಗ್ಗೆ ಭಯಭೀತವಾಗಿದೆ, ಯಾಕೆಂದರೆ ನನ್ನನ್ನು ಖರೀದಿಸಲು ಸಾಧ್ಯವಿಲ್ಲ ಎಂದು ಅವರಿಗೆ ಚೆನ್ನಾಗಿ ತಿಳಿದಿದೆ. ನಾನು ಹೋರಾಟದಲ್ಲಿ ಮುಂದೆಯೆ ನಿಲ್ಲುತ್ತೇನೆ, ಅವರಿಗೆ ಬಂಗಾಳವನ್ನು ಮಾರಾಟ ಮಾಡಲು ಬಿಡುವುದಿಲ್ಲ” ಎಂದು ಹೇಳಿದರು.
PublicNext
12/01/2021 10:49 am