ಬೆಂಗಳೂರು : ಜ. 13 ಅಥವಾ 14ರಂದು ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಆಗಲಿದೆ.ಸಂಪುಟದಲ್ಲಿ ಯಾರಿಗೆ ಯಾವ ಸ್ಥಾನ ನೀಡಬೇಕು ಎಂದು ಹೈಕಮಾಂಡ್ ಒಪ್ಪಿಕೊಂಡಿರುವ ವಿಚಾರವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.
ಮಾಧ್ಯಮಗಳಿಗೆ ಸಿಕ್ಕಿರುವ ಮಾಹಿತಿ ಪ್ರಕಾರ ಏಳು ಜನರು ನೂತನ ಸಚಿವರಾಗಲಿದ್ದಾರೆ.
ನಾಗರಾಜ್, ಆರ್ ಶಂಕರ್, ಉಮೇಶ್ ಕತ್ತಿ ಮತ್ತು ಸಿಪಿ ಯೋಗೇಶ್ವರ್ ಅವರಿಗೆ ಸಚಿವ ಸ್ಥಾನ ನಿಶ್ಚಿತ ಎನ್ನಲಾಗುತ್ತಿದೆ.
ಕೇವಲ ಸಂಪುಟ ವಿಸ್ತರಣೆ ಮಾತ್ರ ಆದಲ್ಲಿ ಮೇಲೆ ತಿಳಿಸಿದ ಎಂಟು ಮಂದಿ ಪೈಕಿ ಏಳು ಮಂದಿಗೆ ಸ್ಥಾನ ಸಿಗಲಿದೆ. ಪುನಾರಚನೆ ಆದಲ್ಲಿ ಎಲ್ಲಾ ಎಂಟು ಮಂದಿಗೂ ಮಂತ್ರಿಭಾಗ್ಯ ಸಿಗುವ ನಿರೀಕ್ಷೆ ಇದೆ.
ಸಂಪುಟ ಪುನಾರಚನೆ ಆಗಿದ್ದೇ ಆದಲ್ಲಿ ಅಬಕಾರಿ ಸಚಿವ ಆರ್. ನಾಗೇಶ್ ಅವರನ್ನ ಸಂಪುಟದಿಂದ ಕೈಬಿಡುವ ಸಾಧ್ಯತೆ ಬಗ್ಗೆ ಕೆಲ ಮಾಧ್ಯಮಗಳಲ್ಲಿ ವರದಿ ಬಂದಿದೆ.
ಮೇಲೆ ತಿಳಿಸಿದ ಸಂಭಾವ್ಯರ ಪಟ್ಟಿಯಲ್ಲಿರುವವರನ್ನು ಹೊರತುಪಡಿಸಿ ಇನ್ನೂ ಹಲವು ಮುಖಂಡರು ತಮ್ಮ ಆಕಾಂಕ್ಷೆಯನ್ನು ಬಹಿರಂಗವಾಗಿ ತೋಡಿಕೊಂಡಿದ್ದಾರೆ. ಅವರಲ್ಲಿ ಚಿತ್ರದುರ್ಗದ ತಿಪ್ಪಾರೆಡ್ಡಿ, ಸೂರಿನ ರಾಮದಾಸ್ ಅವರು ಪ್ರಮುಖರು. ವಿಜಯಪುರದ ದೇವರಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ್ ಸಾಸನೂರ ಅವರೂ ಕೂಡ ಸಚಿವಾಕಾಂಕ್ಷೆಯನ್ನ ತೋರ್ಪಡಿಸಿದ್ದಾರೆ.
ಸಂಪುಟದಿಂದ ಕೈಬಿಡಲಾಗುವವರ ಪಟ್ಟಿಯಲ್ಲಿ ಆರ್ ನಾಗೇಶ್ ಹೆಸರು ಇದೇ ವೇಳೆ ಕೇಳಿಬರುತ್ತಿದೆ.
ಈ ಬಗ್ಗೆ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅಬಕಾರಿ ಸಚಿವರು, ಇವತ್ತಿನ ಒಂದು ಪತ್ರಿಕೆಯಲ್ಲಿ ಈ ವಿಚಾರ ಕೇಳಿ ಶಾಕ್ ಆಯಿತು ಎಂದು ಆಘಾತ ವ್ಯಕ್ತಪಡಿಸಿದ್ದಾರೆ.
PublicNext
11/01/2021 02:17 pm