ನವದೆಹಲಿ: ಮೋದಿ ವಿರೋಧಿ ಇಸ್ಲಾಮಿಕ್ ಮೂಲಭೂತವಾದಿಗಳ ಕುಹಕತನ , ಭಾರತದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾರುವ ವಿಷದ ಪರಿ ನೋಡಿ.. ಅಮೇರಿಕದ ಮಾಜಿ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಟ್ವಿಟರ್ ಖಾತೆ ನಿಷೇಧಿಸಿರುವಂತೆ ಮೋದಿ ಅವರ ಖಾತೆಯನ್ನೂ ನಿಷೇಧಿಸಬೇಕಂತೆ.
1984 ರಲ್ಲಿ ಸಾವಿರ ಸಾವಿರ ಸಿಖ್ ರನ್ನು ಕೊಂದು ಹಾಕಿದ ಕಾಂಗ್ರೆಸ್ ಪಕ್ಷ ತಾನು ಸಾಚಾ ಎಂಬಂತೆ ಈಗ ಇಸ್ಲಾಮಿಕ್ ಮೂಲಭೂತವಾದಿಗಳ ನಿಲುವನ್ನು ಬೆಂಬಲಿಸಿ, ಎಲ್ಲ ಬಿಜೆಪಿ ನಾಯಕರ ಟ್ವಿಟರ್ ಖಾತೆ ರದ್ದು ಪಡಿಸಲು ಆಗ್ರಹಿಸಿರುವುದು ವಿಪರ್ಯಾಸ.
ಕಾರಣ ಏನು ಗೊತ್ತೆ? 2002 ರಲ್ಲಿ ಸಾಬರಮತಿ ಎಕ್ಸಪ್ರೆಸ್ ರೈಲಿನಲ್ಲಿ 59 ಕರಸೇವಕರ ಸಜೀವ ದಹನ ಪ್ರಕರಣದ ನಂತರ ಸಂಭವಿಸಿ ಗೋದ್ರಾ ಹತ್ಯಾಕಾಂಡದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಜನ ಮುಸ್ಲಿಮರು ಮೃತಪಟ್ಟಿದ್ದರಂತೆ. ಈ ಹತ್ಯಾಕಾಂಡಕ್ಕೆ ಪ್ರಚೋದನೆ ನೀಡಿದ್ದೇ ಮೋದಿ. ಹೀಗಾಗಿ ಈ ಘಟನೆ ತಾರ್ಕಿಕ ಅಂತ್ಯ ಕಾಣಬೇಕಾದರೆ ಮೋದಿ ಟ್ವಿಟರ್ ಖಾತೆಯನ್ನು ನಿಷೇಧಿಸುವು ಸೂಕ್ತ ಎಂದು ನಕಲಿ ಸುದ್ದಿಗಳ ವ್ಯಾಪಾರಿ ಹಾಗೂ ಭಾರತ ವಿರೋಧಿ ಖ್ಯಾತಿಯ ಸಿ.ಜೆ ವೆರ್ಲಮೆನ್ ಮಾಡಿದ ಟ್ವೀಟ್ ವಿವಾದಕ್ಕೆ ಕಾರಣವಾಗಿದೆ.
ಅಮೆರಿಕದ ಕ್ಯಾಪಿಟೋಲ್ ಹಾಲ್ ಮೇಲೆ ಟ್ರಂಪ್ ಬೆಂಬಲಿಗರು ನಡೆಸಿದ ದಾಳಿಯ ನಂತರ ಎಲ್ಲಾ ಸಾಮಾಜಿಕ ಜಾಲತಾಣಗಳ ವೇದಿಕೆಗಳಿಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಖಾತೆಯನ್ನು ತೆಗೆದು ಹಾಕಿವೆ.
ಸಿ.ಜೆ ವೆರ್ಲಮೆನ್ ನಿಲುವನ್ನು ಬೆಂಬಲಿಸಿರುವ ಅಮೇರಿಕದ ಬಯೋ ಮೆಡಿಕಲ್ ಸೈಟಿಂಸ್ಟ್ ರಾಹೀಲ್ ಶಫಿ, ಮೋದಿ ಖಾತೆ ರದ್ದುಗೊಳಿಸುವುದೇ ಗೋಧ್ರಾ ಹತ್ಯಾಕಾಂಡದ ಪ್ರಕರಣಕ್ಕೆ ದೊರೆಯುವ ತಾರ್ಕಿಕ ಅಂತ್ಯ ಎಂದು ಹೇಳಿದ್ದಾನೆ.
ಇದಕ್ಕೂ ಪೂರ್ವದಲ್ಲಿಯೇ ಕಾಂಗ್ರೆಸ್ ಯುವ ನಾಯಕ ಶ್ರೀವತ್ಸ ಎಂಬಾತ, ಎಲ್ಲ ಬಿಜೆಪಿ ನಾಯಕರ ಖಾತೆ ನಿಷೇಧಿಸುವಂತೆ ಒತ್ತಾಯಿಸಿದ್ದಾನೆ.
ಟ್ವಿಟರ್, ಫೇಸ್‌ಬುಕ್ ಸೇರಿದಂತೆ ಅನೇಕ ಸಾಮಾಜಿಕ ಜಾಲತಾಣ ಕಂಪನಿಗಳ ಅಧ್ಯಕ್ಷರು ಟ್ರಂಪ್ ಅವರ ವೈಯಕ್ತಿಕ ಖಾತೆಗಳನ್ನು ತಮ್ಮ ಪ್ಲಾಟ್‌ಫಾರ್ಮ್‌ನಿಂದ ಶಾಶ್ವತವಾಗಿ ತೆಗೆದುಹಾಕಿದ್ದಾರೆ. ಅಷ್ಟೇ ಅಲ್ಲದೆ ಅಮೆರಿಕದ ಬಿಕ್ಕಟ್ಟಿನ ಈ ಸಮಯದಲ್ಲಿ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಸಂಬಂಧ ಹೊಂದಿದ್ದ ಅಥವಾ ಅವರನ್ನು ಬೆಂಬಲಿಸಿದ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ. ಈ ಮಧ್ಯೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಟ್ಟಿಟ್ಟರ್ ಖಾತೆಯನ್ನು ತೆಗೆದು ಹಾಕುವಂತೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ ತೊಡಗಿವೆ.
PublicNext
10/01/2021 01:26 pm