ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪರಿಷತ್ ಕೋಲಾಹಲ: ತನಿಖಾ ಸಮಿತಿಗೆ ವಿಶ್ವನಾಥ್, ಸಂಕನೂರು ರಾಜೀನಾಮೆ

ಬೆಂಗಳೂರು: ಡಿಸೆಂಬರ್‌ 15 ರಂದು ವಿಧಾನ ಪರಿಷತ್‌ನಲ್ಲಿ ನಡೆದ ಕೋಲಾಹಲದ ಕುರಿತಾಗಿ ತನಿಖೆ ನಡೆಸಲು ಸಭಾಪತಿ ಪ್ರತಾಪಚಂದ್ರ ಶೆಟ್ಟಿ ಅವರು ಪರಷತ್ತಿನ ಹಿರಿಯ ಸದಸ್ಯರನ್ನು ಒಳಗೊಂಡಂತೆ ತನಿಖಾ ಸಮಿತಿ ರಚಿಸಿದ್ದರು. ಈ ತನಿಖಾ ಸಮಿತಿಯಲ್ಲಿದ್ದ ಸದಸ್ಯರುಗಳಾದ ಎಚ್ ವಿಶ್ವನಾಥ್ ಹಾಗೂ ಎಸ್.ವಿ ಸಂಕನೂರು ರಾಜೀನಾಮೆ ಸಲ್ಲಿಸಿದ್ದಾರೆ.

ತನಿಖಾ ಸಮಿತಿ ಅಧ್ಯಕ್ಷ ಮರಿತಿಬ್ಬೇಗೌಡ ಅವರಿಗೆ ವಿಶ್ವನಾಥ್ ಮತ್ತು ಸಂಕನೂರು ರಾಜೀನಾಮೆ ಪತ್ರ ನೀಡಿದ್ದಾರೆ. ಆದರೆ ರಾಜೀನಾಮೆಗೆ ಏನು ಕಾರಣ ಎಂಬುವುದನ್ನು ಅದರಲ್ಲಿ ಉಲ್ಲೇಖಿಸಿಲ್ಲ. ಡಿಸೆಂಬರ್ 15 ರಂದು ವಿಧಾನಪರಿಷತ್‌ ಸಭಾಪತಿ ಬದಲಾವಣೆ ವಿಚಾರವಾಗಿ ಅವಿಶ್ವಾಸ ಮಂಡನೆಯ ಸಂದರ್ಭದಲ್ಲಿ ಕಾಂಗ್ರೆಸ್, ಬಿಜೆಪಿ ಸದಸ್ಯರ ನಡುವೆ ಕೋಲಾಹಲ ನಡೆದಿತ್ತು.

ಈ ಸಂದರ್ಭದಲ್ಲಿ ಸದನದ ಬೆಲ್‌ ಅವಧಿ ಮುಗಿಯುವುದಕ್ಕಿಂತ ಸಭಾಪತಿಯ ಪೀಠದಲ್ಲಿ ಕುಳಿತಿದ್ದ ವಿಧಾನ ಪರಿಷತ್ ಉಪಸಭಾಪತಿ ದಿ. ಎಸ್‌.ಎಲ್‌ ಧರ್ಮೇಗೌಡರನ್ನು ಬಲವಂತವಾಗಿ ಪೀಠದಿಂದ ಎಬ್ಬಿಸಲಾಗಿತ್ತು. ಈ ವೇಳೆ ಕಾಂಗ್ರೆಸ್, ಬಿಜೆಪಿ ಸದಸ್ಯರ ನಡುವೆ ತೀವ್ರ ಜಟಾಪಟಿ ನಡೆದಿತ್ತು.

Edited By : Nagaraj Tulugeri
PublicNext

PublicNext

08/01/2021 02:58 pm

Cinque Terre

119.31 K

Cinque Terre

3

ಸಂಬಂಧಿತ ಸುದ್ದಿ