ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್,ಯಡಿಯೂರಪ್ಪ ಅವರನ್ನು ಇಂದು ಭೇಟಿಯಾದ ವಿಧಾನ ಪರಿಷತ್ ಸದಸ್ಯ ಆರ್.ಶಂಕರ್ ಚರ್ಚೆಯ ಬಳಿಕ ಫುಲ್-ಖುಷ್ ಹಾಗೂ ಜೋಶ್‌ನಲ್ಲಿದ್ದಾರೆ.
ಸಿಎಂ ಭೇಟಿಯ ಬಳಿಕ ಮಾತನಾಡಿದ ಅವರು, ''ಇಂದು ಸಂಜೆಯೇ ನಾನು ಮಂತ್ರಿಯಾಗಬಹುದು, ಹೇಳಲಾಗಲ್ಲ. ಎಂದಿನಂತೆ ಇಂದೂ ಮುಖ್ಯಮಂತ್ರಿಗಳ ಭೇಟಿಗೆ ಬಂದಿದ್ದೆ. ಎರಡ್ಮೂರು ದಿನದಲ್ಲಿ ಮಂತ್ರಿ ಆಗುತ್ತಿಯ ಎಂದು ಸಿಎಂ ಭರವಸೆ ನೀಡಿದ್ದಾರೆ. ನಾನು, ಉಮೇಶ್ ಕತ್ತಿ ಸಿಎಂ ಜೊತೆ ತಿಂಡಿ ತಿಂದ್ವಿ. ಈ ವೇಳೆ ಶಾಸಕ ಉಮೇಶ್ ಕತ್ತಿಗೂ ಬಿಎಸ್‌ವೈ ಇದನ್ನೇ ಹೇಳಿದರು'' ಎಂದರು.
PublicNext
05/01/2021 03:52 pm