ಬೆಂಗಳೂರು: ನನಗೂ ಪ್ರಜ್ವಲ್ ಗೂ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಪದೇ ಪದೇ ಇಂತಹ ವಿಚಾರ ಬರೋದು ಸರಿಯಲ್ಲ. ನಾವಿಬ್ಬರೂ ಒಟ್ಟಾಗಿ ಕೆಲಸ ಮಾಡ್ತೀವಿ. ಎಂದು ನಿಖಿಲ್ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರಿನ ಜೆಪಿ ಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ನಾವು ಸರ್ಕಾರದ ವೈಫಲ್ಯಗಳ ವಿರುದ್ಧ ಹೋರಾಟ ಮಾಡ್ತೀವಿ. ಅದೇ ವಿಷಯವಾಗಿ ಪಾದಯಾತ್ರೆ ಮಾಡ್ತೀವಿ. ಈ ಮೂಲಕ ಪಕ್ಷ ಸಂಘಟನೆ ಮಾಡ್ತೀವಿ ಎಂದಿದ್ದಾರೆ.
30 ಜಿಲ್ಲೆಗಳಿಂದಲೂ ಜೆಡಿಎಸ್ ಯುವನಾಯಕರ ಜೊತೆ ಸಭೆ ಮಾಡುತ್ತಿದ್ದೇವೆ. ಪ್ರಜ್ವಲ್ ಮತ್ತು ನಾನು ಸೇರಿ ಪಕ್ಷಕ್ಕಾಗಿ ಯುವಪಡೆ ಕಟ್ಟುತ್ತೇವೆ. ಯುವ ಘಟಕದ ಮೂಲಕ ಪಕ್ಷ ಬಲಗೊಳಿಸುವ ಕೆಲಸ ಮಾಡುತ್ತೇವೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
PublicNext
04/01/2021 08:51 pm