ಲಕ್ನೋ: ‘ಉತ್ತರ ಪ್ರದೇಶವು ರಾಜಕೀಯ ದ್ವೇಷ, ವಿಭಜನೆ ಹಾಗೂ ಮತಾಂಧತೆಯ ಕೇಂದ್ರವಾಗಿದೆ' ಎಂದು 104 ನಿವೃತ್ತ ನಾಗರಿಕ ಸೇವೆ ಅಧಿಕಾರಿಗಳು ಆರೋಪಿಸಿ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಪತ್ರ ಬರೆದಿದ್ದಾರೆ.
ಡಿಸೆಂಬರ್ 29ರಂದು ಬರೆದ ಈ ಪತ್ರಕ್ಕೆ ಮಾಜಿ ವಿದೇಶಾಂಗ ಕಾರ್ಯದರ್ಶಿ ನಿರುಪಮ ರಾವ್, ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿದ್ದ ಶಿವಶಂಕರ್ ಮೆನನ್, ಮುಖ್ಯ ಮಾಹಿತಿ ಆಯುಕ್ತರಾಗಿದ್ದ ವಜಾಹತ್ ಹಬಿಬುಲ್ಲಾ ಅವರು ಸಹಿ ಹಾಕಿದ್ದಾರೆ. ಅಷ್ಟೇ ಅಲ್ಲದೆ ರಾಜ್ಯದಲ್ಲಿ ಆಡಳಿತದ ಸಂಸ್ಥೆಗಳು ಕೋಮು ವಿಷಯದಲ್ಲಿ ಮುಳುಗಿವೆ ಎಂದು ದೂರಿದ್ದಾರೆ.
ಕಾನೂನುಬಾಹಿರ ಧಾರ್ಮಿಕ ಮತಾಂತರಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ನವೆಂಬರ್ 27ರಂದು ಉತ್ತರ ಪ್ರದೇಶ ಸರ್ಕಾರವು ಈ ಸುಗ್ರೀವಾಜ್ಞೆ ಹೊರಡಿಸಿತ್ತು. ಆದರೆ ಈ ಸುಗ್ರೀವಾಜ್ಞೆಯನ್ನು ಹಿಂಪಡೆಯಬೇಕು ಎಂದು ಪತ್ರದ ಮೂಲಕ ಒತ್ತಾಯಿಸಲಾಗಿದೆ.
PublicNext
30/12/2020 06:39 pm