ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಮಂತ್ರಿ ಮಂಡಲದ ವಿರುದ್ಧ ಕಾಂಗ್ರೆಸ್ ಮಂಡಿಸಿರುವ ಅವಿಶ್ವಾಸ ನಿರ್ಣಯದ ಪ್ರಸ್ತಾವದ ಚರ್ಚೆಯ ನಂತರ ಧ್ವನಿ ಮತದ ಮೂಲಕ ನಿರ್ಧಾರ ಕೈಗೊಳ್ಳಲು ವಿಧಾನ ಸಭೆಯಲ್ಲಿ ತೀರ್ಮಾನಿಸಲಾಯಿತು.
ಅವಿಶ್ವಾಸ ನಿರ್ಣಯ ಮಂಡನೆ ಹಿನ್ನೆಲೆಯಲ್ಲಿ ಧ್ವನಿಮತಕ್ಕೆ ಹಾಕುವ ಕುರಿತು ಸ್ಪೀಕರ್ ಮನವಿ ಮಾಡಿಕೊಂಡರು.
ಬಳಿಕ ಸಚಿವ ಮಾಧುಸ್ವಾಮಿ ಕೂಡ ವಿರೋಧ ಪಕ್ಷದ ಬಳಿ ಮನವಿ ಮಾಡಿಕೊಂಡರು.
ಕಡ್ಡಾಯ ಮಾಡುವುದಾದರೆ ಪಿಪಿಇ ಕಿಟ್ ಹಾಕಿ ಕರೆದುಕೊಂಡು ಬರಬೇಕಾಗುತ್ತದೆ.
ಈ ಕಾರಣಕ್ಕಾಗಿ ವಿರೋಧ ಪಕ್ಷ ಸಹಕಾರ ನೀಡಬೇಕು. ಮತಕ್ಕೆ ಹಾಕುವುದಾದರೆ ನಮ್ಮ ಸದಸ್ಯರನ್ನು ತಯಾರು ಮಾಡಿದ್ದೇವೆಂದು ಹೇಳಿದರು.
ಈ ವೇಳೆ ಮಾತನಾಡಿದ ಸಿದ್ದರಾಮಯ್ಯ ಅವರು, ಎರಡೂ ಪಕ್ಷದ ಶಾಸಕರು ಕೊರೊನಾಗೆ ಸೋಂಕಿಗೊಳಗಾಗಿದ್ದಾರೆ.
ನಮಗೂ ಸಾಮಾಜಿಕ ಜವಾಬ್ದಾರಿ ಇದೆ. ಅವಿಶ್ವಾಸ ನಿರ್ಣಯ ಮಂಡನೆ ಮಾಡಿ ಮತಕ್ಕೆ ಹಾಕುವಂತೆ ಸಾಮಾನ್ಯವಾಗಿ ಬೇಡಿಕೆ ಇಡುತ್ತೇವೆ.
ಮನುಷ್ಯತ್ವ, ಜೀವನ ಮುಖ್ಯ ಎಂಬ ಕಾರಣದಿಂದ ಮಾನವೀಯ ದೃಷ್ಟಿಯಿಂದ ನಿಮ್ಮ ಮನವಿ ಮೇಲೆಗೆ ಮತ ವಿಭಜನೆ ಬದಲಾಗಿ ಧ್ವನಿ ಮತಕ್ಕೆ ಹಾಕುತ್ತೇವೆಂದು ಹೇಳಿದರು.
PublicNext
26/09/2020 01:32 pm