ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾಯಲ್ಲಿ ರಕ್ತ-ಮೊಗದಲ್ಲಿ ನಗು-ಪೊಲೀಸ್ ಪೋಟೋ ವೈರಲ್

ಪತ್ತನಂತಿಟ್ಟ:ಅಗ್ನಿಪಥ ಯೋಜನೆ ವಿರೋಧಿಸಿ ಎಲ್ಲೆಡೆ ಪ್ರತಿಭಟನೆ ನಡೆಯುತ್ತಿದೆ. ಕೇರಳದಲ್ಲಿ ಅಖಿಲ ಭಾರತ ಯುವ ಒಕ್ಕೂಟ ಪ್ರತಿಭಟನೆ ನಡೆಸಿದೆ.ಇದೇ ವೇಳೆ ಇಲ್ಲಿ ಸಿವಿಲ್ ಪೊಲೀಸ್ ಅಧಿಕಾರಿಗೆ ಕಲ್ಲೇಟು ಬಿದ್ದಿದೆ.ರಕ್ತ ಸುರಿದಿದೆ. ಆದರೂ, ಆ ಅಧಿಕಾರಿ ನಗುಮೊಗದಲ್ಲಿಯೇ ರಿಯಾಕ್ಟ್ ಮಾಡಿದ್ದಾರೆ. ಆ ಫೋಟೋ ಈಗ ವೈರಲ್ ಆಗಿದೆ.

ಹೌದು.ಆ ಪೊಲೀಸ್ ಅಧಿಕಾರಿಯ ಹೆಸರು ಅಜಿತ್. ಈ ಅಜಿತ್ ಅವ್ರು ಪ್ರೋಟೆಸ್ಟ್ ವೇಳೆ ಡ್ಯೂಟಿ ಮೇಲೆ ಇದ್ದರು. ಆಗ ಪ್ರತಿಭಟನಾಕಾರರು ಬ್ಯಾರಿಕೇಡ್ ತಳ್ಳಲು ಆರಂಭಿಸಿದರು. ಆಗಲೇ ಏನೂ ಪ್ರಚೋದನಕಾರಿ ಆಕ್ಷನ್ ಅನ್ನ ಪೊಲೀಸರು ಈ ಸಮಯದಲ್ಲಿ ತೆಗೆದುಕೊಂಡಿರಲಿಲ್ಲ.

ಆದರೂ ಪ್ರತಿಭಟನಾಕಾರರು ರೊಚ್ಚಿಗೆದ್ದಾಗ,ತೂರಿ ಬಂದ ಕಲ್ಲೊಂದು ಅಜಿತ್ ಮುಖಕ್ಕೆ ಬಡಿದ ಬಿಟ್ಟಿದೆ. ಬಾಯಿಯಿಂದಲೂ ರಕ್ತ ಸುರಿದಿದೆ.ಆಗಲೇ ಆ ನೋವನ್ನ ತೋರದೇ ಸುಮ್ಮನೇ ಇದ್ರು ಅಜಿತ್,ಆದರೂ ರಕ್ತ ಸುರಿದಾಗ ಅಲ್ಲಿದೋರೆಲ್ಲ ಗಾಬರಿಯಾದರು. ಪ್ರತಿಭಟನಾಕಾರರು ಸಹಾನುಭೂತಿ ತೋರಿದರು. ಅದಕ್ಕೇನೆ ನನಗೆ ನಗು ಬಂತು ಅಂತಲೇ ಅಜಿತ್ ಹೇಳಿಕೊಂಡಿದ್ದಾರೆ.

Edited By :
PublicNext

PublicNext

21/06/2022 08:00 pm

Cinque Terre

50.12 K

Cinque Terre

1

ಸಂಬಂಧಿತ ಸುದ್ದಿ