ಭಾರತದ ಅರ್ಧದಷ್ಟು ಮೊಬೈಲ್ ಬಳಕೆದಾರರು ಹಳ್ಳಿಯ ಜನರು. ಇನ್ನು ಮೂರು ವರ್ಷಗಳಲ್ಲಿ ದೇಶದ ಪ್ರತಿ ಹಳ್ಳಿಯೂ ಹೈ ಸ್ಪೀಡ್ ಫೈಬರ್ ಆಪ್ಟಿಕ್ ಡಾಟಾ ಸಂಪರ್ಕ ಹೊಂದುವಂತೆ ಕ್ರಮ ಕೈಗೊಳ್ಳಲಾಗುವುದು.
ಈ ಮೂಲಕ ಗ್ರಾಮಾಂತರ ಪ್ರದೇಶಗಳಲ್ಲಿ ವೇಗದ ಇಂಟರ್ನೆಟ್ ಸೌಕರ್ಯ ಕಲ್ಪಿಸಲಾಗುವುದು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಭಾರತೀಯ ಮೊಬೈಲ್ ಕಾಂಗ್ರೆಸ್ (ಐಎಂಸಿ) 2020ನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿ ಮಾತನಾಡಿದರು.
ತಾಂತ್ರಿಕ ನವೀಕರಣದ ಕಾರಣದಿಂದಾಗಿ ನಾವು ಆಗಾಗ ಹ್ಯಾಂಡ್ ಸೆಟ್ ಮತ್ತು ಗ್ಯಾಜೆಟ್ ಗಳನ್ನು ಬದಲಿಸುವ ಸಂಪ್ರದಾಯ ಹೊಂದಿದ್ದೇವೆ.
ಲಕ್ಷಾಂತರ ಭಾರತೀಯರ ಸಬಲೀಕರಣ ಮತ್ತು ಭವಿಷ್ಯದ ತಂತ್ರಜ್ಞಾನವನ್ನು ಉತ್ತುಂಗಕ್ಕೆ ಒಯ್ಯಲು 5ಜಿ ಸೇವೆಯನ್ನು ಆದಷ್ಟು ಬೇಗ ಪ್ರಾರಂಭಿಸಲು ಚಿಂತಿಸಬೇಕು.
ಟೆಲಿಕಾಂ ಉಪಕರಣಗಳ ಉತ್ಪಾದನೆ, ವಿನ್ಯಾಸ, ಅಭಿವೃದ್ಧಿಯಲ್ಲಿ ಭಾರತವನ್ನು ಜಾಗತಿಕ ಕೇಂದ್ರವನ್ನಾಗಿಸಲು ನಾವೆಲ್ಲ ಒಟ್ಟಾಗಿ ಕೆಲಸ ಮಾಡಬೇಕು ಎಂದು ಪ್ರಧಾನಿ ಹೇಳಿದರು.
ನಾವು ಈಗಾಗಲೇ ಅಂಡಮಾನ್ ಮತ್ತು ನಿಕೋಬಾರ್ ದ್ವೀಪವನ್ನು ಫೈಬರ್ ಆಪ್ಟಿಕ್ ಕೇಬಲ್ ನೊಂದಿಗೆ ಜೋಡಿಸಿದ್ದೇವೆ.
ದೇಶದ ಹಲವು ಜಿಲ್ಲೆಗಳಲ್ಲಿ, ಈಶಾನ್ಯ ರಾಜ್ಯಗಳಲ್ಲಿ, ಲಕ್ಷದ್ವೀಪಗಳಲ್ಲಿ, ಫಿಕ್ಸ್ ಲೈನ್ ಬ್ರಾಡ್ ಬಾಂಡ್ ಸೇವೆಗಳನ್ನು ಮತ್ತು ಸಾರ್ವಜನಿಕ ವೈಫೈ ಹಾಟ್ ಸ್ಪಾಟ್ ಗಳನ್ನು ನೀಡಲು ಸರ್ಕಾರ ಉತ್ಸುಕವಾಗಿದೆ ಎಂದರು.
PublicNext
08/12/2020 03:33 pm