ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ಹಿಂದೂ' ಎನ್ನುವುದು ಧರ್ಮವೇ ಅಲ್ಲ: ಇಮಾಮ್ ಅಸೋಸಿಯೇಷನ್ ಅಧ್ಯಕ್ಷ

ನವದೆಹಲಿ: ಮೊಟ್ಟಮೊದಲಿಗೆ ಹೇಳುವುದಾದರೆ, ಹಿಂದೂ ಎನ್ನುವುದು ಧರ್ಮವೇ ಅಲ್ಲ. ಗ್ಯಾನವಾಪಿ ಮಸೀದಿಯಲ್ಲಿ ಪತ್ತೆಯಾಗಿರುವುದು ಶಿವಲಿಂಗವೆಂದು ಹೇಳಲಾಗುತ್ತಿರುವ ಆಕೃತಿಯ ಬಗ್ಗೆ ಅನಗತ್ಯವಾಗಿ ಸಂಭ್ರಮಪಡುತ್ತಿದ್ದಾರೆ ಎಂದು ಆಲ್ ಇಂಡಿಯಾ ಇಮಾಮ್ ಅಸೋಸಿಯೇಷನ್ ಅಧ್ಯಕ್ಷ ಮೌಲಾನಾ ಸಾಜಿದ್ ರಶೀದಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಅಂಬರ್ ಜೈದಿ ಅವರೊಂದಿಗಿನ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಮೌಲಾನಾ ಸಾಜಿದ್ ರಶೀದಿ ಕೋರ್ಟ್ ತೀರ್ಪನ್ನು ಸಹ ಅನುಮಾನಿಸಿದ್ದಾರೆ. 'ನ್ಯಾಯಾಂಗವು ಹಿಂದೂಗಳ ಪರವಾಗಿ ಪಕ್ಷಪಾತದ ಆದೇಶವನ್ನು ಹೊರಡಿಸಿದೆ. ಭಾರತದ ಯಾವುದೇ ನ್ಯಾಯಾಲಯವು 1947ರಿಂದ ಅಸ್ತಿತ್ವದಲ್ಲಿರುವ ಧಾರ್ಮಿಕ ಸ್ಥಳಗಳಲ್ಲಿ ಹಸ್ತಕ್ಷೇಪ ಮಾಡುವ ಹಕ್ಕನ್ನು ಹೊಂದಿಲ್ಲ ಮತ್ತು ಪೂಜಾ ಸ್ಥಳಗಳ ಕಾಯಿದೆಯನ್ನು ಧಿಕ್ಕರಿಸುವ ಅರ್ಜಿಗಳನ್ನು ಯಾವುದೇ ನ್ಯಾಯಾಲಯವು ಅನುಮತಿಸುವುದಿಲ್ಲ. ಈ ಪ್ರಕರಣದಲ್ಲಿ, ನ್ಯಾಯಾಲಯವು ಅರ್ಜಿಯನ್ನು ಅಂಗೀಕರಿಸಿತು, ವಿಡಿಯೋಗ್ರಾಫಿ ಸಮೀಕ್ಷೆಗೆ ಅವಕಾಶ ಮಾಡಿಕೊಟ್ಟಿತು ಮತ್ತು ಈಗ ವುಜುಖಾನಾದಲ್ಲಿ ಮುಸ್ಲಿಮರ ಪ್ರವೇಶವನ್ನು ನಿರ್ಬಂಧಿಸುವ ಮೂಲಕ ಮಸೀದಿಗಳ ಧಾರ್ಮಿಕ ಆಚರಣೆಗಳಲ್ಲಿ ಹಸ್ತಕ್ಷೇಪ ಮಾಡಿದೆ. ವುಝು ನಮಾಜ್‌ನ ಪ್ರಮುಖ ಭಾಗವಾಗಿದೆ ಮತ್ತು ಇಲ್ಲಿನ ಇಸ್ಲಾಮಿಕ್ ಧಾರ್ಮಿಕ ಆಚರಣೆಯನ್ನು ಹಾಳುಮಾಡಲು ನ್ಯಾಯಾಲಯ ಕಾರಣವಾಗಿದೆ ಎಂದು ಅವರು ಆರೋಪಿಸಿದರು.

ಮೊಘಲ್ ಚಕ್ರವರ್ತಿ ಅಕ್ಬರ್ ಆಳ್ವಿಕೆಯಿಂದಲೂ ಗ್ಯಾನವಾಪಿ ಮಸೀದಿ ಅಸ್ತಿತ್ವದಲ್ಲಿದೆ. ದೇವಾಲಯವನ್ನು ಕೆಡವಿ ಔರಂಗಜೇಬನಿಂದ ಯಾವದೇ ಮಸೀದಿ ನಿರ್ಮಾಣವಾಗಿಲ್ಲ. ಇತ್ತೀಚೆಗೆ ಪತ್ತೆಯಾದ ರಚನೆಯು ಹಳೆಯ ಕಾರಂಜಿಯ ಭಾಗವಾಗಿದೆ ಮತ್ತು ಶಿವಲಿಂಗವಲ್ಲ. ಹಳೆಯ ಇಸ್ಲಾಮಿಕ್ ಆಡಳಿತಗಾರರು 100 ವರ್ಷಕ್ಕೂ ಅಧಿಕ ಕಾಲ ದೇವಾಲಯವನ್ನು ನಾಶ ಮಾಡಿ ಶಿವಲಿಂಗವನ್ನು ಮಾತ್ರ ಜೋಪಾನವಾಗಿ ಇಡುವ ಮೂರ್ಖರಾಗಿದ್ದರೇ? ದೇವಾಲಯಗಳನ್ನು ನಾಶ ಮಾಡುವ ಯೋಜನೆ ಇದ್ದಿದ್ದರೆ, ಶಿವಲಿಂಗವನ್ನು ಏಕೆ ಬಿಡುತ್ತಿದ್ದರು' ಎಂದು ಹೇಳಿದ್ದಾರೆ.

Edited By : Vijay Kumar
PublicNext

PublicNext

19/05/2022 11:06 pm

Cinque Terre

97.08 K

Cinque Terre

122