ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೊಸ ಮದರಸಾಗಳಿಗೆ ಶಾಕ್ ಕೊಟ್ಟ ಯೋಗಿ ಸರ್ಕಾರ

ಲಖನೌ (ಉತ್ತರ ಪ್ರದೇಶ) : ಮದರಸಾಗಳಲ್ಲಿ ರಾಷ್ಟ್ರಗೀತೆಯನ್ನು ಕಡ್ಡಾಯಗೊಳಿಸಿದ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಈಗ ಮತ್ತೊಂದು ಶಾಕ್ ಕೊಟ್ಟಿದ್ದಾರೆ.ಹೌದು ಹೊಸ ಮದರಸಾಗಳಿಗೆ ಧನಸಹಾಯ ನಿಲ್ಲಿಸುವ ನಿರ್ಧಾರ ಯೋಗಿ ಸರ್ಕಾರ ಪ್ರಕಟಿಸಿದೆ.ಹೊಸ ಮದರಸಾಗಳನ್ನು ಅನುದಾನದ ಪಟ್ಟಿಯಿಂದ ಹೊರಗಿಡುವ ಪ್ರಸ್ತಾಪವನ್ನು ಇಂದು ನಡೆದ ಸಚಿವ ಸಂಪುಟದ ಸಭೆಯಲ್ಲಿ ಅಂಗೀಕರಿಸಲಾಗಿದೆ.

ಮಾರ್ಚ್ 24 ರಂದು ನಡೆದ ಉತ್ತರ ಪ್ರದೇಶ ಮದರಸಾ ಶಿಕ್ಷಣ ಮಂಡಳಿಯ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿತ್ತು. ಹೊಸ ಮದರಸಾಗಳಿಗೆ ಅನುದಾನ ನಿಲ್ಲಿಸುವ ಈ ಆದೇಶವನ್ನು ಧ್ವನಿ ಮತದ ಮೂಲಕ ಅಂಗೀಕರಿಸಲಾಯಿತು. ಅಲ್ಪಸಂಖ್ಯಾತರ ಕಲ್ಯಾಣ ಖಾತೆ ಸಚಿವ ಡ್ಯಾನಿಶ್ ಆಜಾದ್ ಅನ್ಸಾರಿ ಆದೇಶ ಮಂಡಿಸಿದರು. ಈ ಮೂಲಕ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಸರ್ಕಾರದ ನೀತಿಗೆ ಹಾಲಿ ಸರ್ಕಾರ ಅಂತ್ಯ ಹಾಡಿದೆ.

ಉತ್ತರ ಪ್ರದೇಶದಲ್ಲಿ 7,000ಕ್ಕೂ ಹೆಚ್ಚು ಮದರಸಾಗಳಿವೆ. ಇವಗಳ ಪೈಕಿ ನಕಲಿ ಮದರಸಾಗಳು ಕಾರ್ಯ ನಿರ್ವಹಿಸುತ್ತಿದ್ದ ಬಗ್ಗೆ ಸರ್ಕಾರಕ್ಕೆ ದೂರುಗಳು ಬಂದಿದ್ದವು.

Edited By : Nirmala Aralikatti
PublicNext

PublicNext

18/05/2022 06:39 pm

Cinque Terre

42.53 K

Cinque Terre

11