ಬೆಂಗಳೂರು: ಸಿಲಿಕಾನ್ ಸಿಟಿಯ ಕೆಲವು ಪ್ರದೇಶಗಳಲ್ಲಿ ಕನ್ನಡಿಗರೇ ಕಡಿಮೆ. ಬ್ರಿಟಿಷರ ಕಾಲದಲ್ಲಿ ರೈಲ್ವೆ ದಂಡು ಸುತ್ತಮುತ್ತ ರೈಲ್ವೆ ಕೆಲಸ ಮಾಡಲು ಮದ್ರಾಸ್ ಕಡೆಯಿಂದ ಇಲ್ಲಿಗೆ ಒಂದು ನೆಲೆಸಿದವರಲ್ಲಿ ತಮಿಳರೇ ಹೆಚ್ಚಾಗಿದ್ದಾರೆ. ಹಾಗೆಯೇ ತೆಲುಗು ಭಾಷಿಕರು ಸಹ. ವಿಪರ್ಯಾಸವೆಂದರೆ ಕನ್ನಡೇತರರೇ ಹೆಚ್ಚಿನ ಸಂಖ್ಯೆಯಲ್ಲಿ 80ಕ್ಕೂ ಹೆಚ್ಚು ಕನ್ನಡಪರ ಸಂಘಟನೆಗಳನ್ನ ಹುಟ್ಟು ಹಾಕಿ ಸದ್ದಿಲ್ಲದೆ ಕನ್ನಡಮ್ಮನ ಸೇವೆ ಮಾಡಿಕೊಂಡು ಬರ್ತಿದ್ದಾರೆ!
ಇಂದು ಸರ್ವಜ್ಞನಗರ ವಿಧಾನಸಭೆ ಕ್ಷೇತ್ರದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯಚಟುವಟಿಕೆ ಉದ್ಘಾಟನೆ ಜೊತೆಗೆ ಭಾಷೆಗೆ ದುಡಿದ ಸಾಧಕರನ್ನು ಸನ್ಮಾನಿಸಿತು. ಕೆ.ಜೆ.ಜಾರ್ಜ್ ಮತ್ತಿತರ ಗಣ್ಯರು ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸಬೇಕೆಂದರು.
ಬೆಂಗಳೂರಿನ ಪೂರ್ವ ಮತ್ತು ಈಶಾನ್ಯ ಭಾಗದಂತಿರುವ ಸರ್ವಜ್ಞನಗರ ವಿಧಾನಸಭೆ ಕ್ಷೇತ್ರ 2008ರಿಂದ ಪ್ರಾರಂಭವಾಗಿ ದಶಕ ಸವೆಸಿದೆ. ಮೂಲ ಸೌಲಭ್ಯ ಜೊತೆಗೆ ಕನ್ನಡ ಭಾಷೆನ ತಮಿಳು, ತೆಲುಗು ಭಾಷೆಯಷ್ಟೇ ಸಮನಾಗಿ ಬೆಳೆಸಬೇಕಿದೆ. ತಮಿಳು ಪ್ರಾಬಲ್ಯವಿರುವ ನನ್ನ ಕ್ಷೇತ್ರದಲ್ಲಿ ಸರ್ವಜ್ಞನ ಪ್ರತಿಮೆ ಸ್ಥಾಪಿಸಲು ಉತ್ಸುಕರಾಗಿದ್ದೇವೆ.
ಕಾಚರಕನಹಳ್ಳಿ & HBR ಲೇಔಟ್ ಸರ್ಕಲ್ ನಲ್ಲಿ ಬೃಹತ್ ಸರ್ವಜ್ಞನ ಎರಡು ಪ್ರತಿಮೆ ಹಾಗೂ ಕನ್ನಡ ಭವನ ನಿರ್ಮಿಸಲು ಸಿದ್ಧವಿದ್ದೇವೆ ಎಂದು ಕೆ.ಜೆ.ಜಾರ್ಜ್ ತಿಳಿಸಿದರು. ಕನ್ನಡ ಭಾಷೆಯ ಕಾರ್ಯ ಚಟುವಟಿಕೆ ಚೆನ್ನಾಗಿ ಆಗಬೇಕೆಂದು ಇತರ ಗಣ್ಯರೂ ತಿಳಿಸಿದರು.
- SureshBabu Public Next ಬೆಂಗಳೂರು
PublicNext
18/05/2022 04:10 pm