ಬೆಂಗಳೂರು: ಒಂದು ಬಸ್ ಓಡಿಸುವುದಕ್ಕೂ ಕೂಡ ಒಂದು ಡೆಸಿಬಲ್ ಲಿಮಿಟ್ ಅಂತ ಇರುತ್ತದೆ. ಆ ಪ್ರಕಾರವೇ ಬಸ್ ಓಡಿಸಬೇಕೆಂಬ ನಿಯಮ ಇದೆ. ಅದರಂತೆ ಮಸೀದಿಗಳಲ್ಲಿ ಅಜಾನ್ ಕೂಗುವಾಗ ಇಷ್ಟೇ ಡಿಸಿಬಲ್ ಇರಬೇಕೆಂಬ ಸುಪ್ರೀಂ ಕೋರ್ಟ್ ನಿಯಮ ಇದೆ. ಅದರ ಪ್ರಕಾರವಾಗಿ ಅವರು ಕೂಡ ನಡೆದುಕೊಳ್ಳಬೇಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಲ್ಲವನ್ನೂ ಕೂಡ ನಿಯಮದ ಅಡಿಯಲ್ಲೇ ಮಾಡಬೇಕಾಗುತ್ತದೆ. ಸುಪ್ರಿಂ ಕೋರ್ಟ್ ಆದೇಶ ಪ್ರಕಾರವೇ ನಡೆದುಕೊಳ್ಳಬೇಕಾಗುತ್ತದೆ. ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‌ನವರು ಎಲ್ಲದರಲ್ಲೂ ರಾಜಕಾರಣ ಮಾಡುತ್ತಾರೆ. ಸ್ವಾತಂತ್ರ್ಯ ಬಂದಾಗಿನಿಂದ ಓಟ್ ಬ್ಯಾಂಕ್ ರಾಜಕಾರಣ ಮಾಡಿಕೊಂಡೇ ಬಂದಿದ್ದಾರೆ. ವೋಟ್ ಬ್ಯಾಂಕ್ ರಾಜಕಾರಣ ಮಾಡಿಕೊಂಡೇ ಸಿಂಹಾಸನದ ಮೇಲೆ ಕುಳಿತಿದ್ದಾರೆ. ವೋಟ್ ಬ್ಯಾಂಕ್ ರಾಜಕಾರಣ ಮಾಡದಿದ್ದರೆ ಅವರ ಸಿಂಹಾಸನ ಅಲ್ಲಾಡುತ್ತದೆ. ಹಿಜಾಬ್, ಹಲಾಲ್ ವಿಚಾರಗಳಲ್ಲಿ ಕಾಂಗ್ರೆಸ್ ತನ್ನ ನಿಲುವು ಏನು ಅನ್ನುವುದನ್ನು ಸ್ಪಷ್ಟವಾಗಿ ಹೇಳಬೇಕು ಎಂದು ಜ್ಞಾನೇಂದ್ರ ಒತ್ತಾಯಿಸಿದ್ದಾರೆ.
ಸ್ಥಳೀಯ ಪೊಲೀಸರು ಎಲ್ಲೆಲ್ಲಿ ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘನೆ ಆಗಿದೆ ನೋಡಿಕೊಳ್ತಾರೆ. ಲಾ ಆ್ಯಂಡ್ ಆರ್ಡರ್ ಉಲ್ಲಂಘನೆ ಆಗದಂತೆ ನೋಡಿಕೊಳ್ಳುತ್ತೇವೆ. ನಿಯಮ ಉಲ್ಲಂಘನೆ ಆದಲ್ಲಿ ಸಭೆ ನಡೆಸುವುದು, ನೊಟೀಸ್ ನೀಡುವುದು ಎಲ್ಲವೂ ಸ್ಥಳೀಯ ಪೊಲೀಸರೇ ಮಾಡ್ತಾರೆ ಎಂದು ಆರಗ ಜ್ಞಾನೇಂದ್ರ ಹೇಳಿದ್ದಾರೆ.
PublicNext
05/04/2022 01:39 pm