ಗದಗ : ಆರ್ ಎಸ್ ಎಸ್ ಅನ್ನುವದನ್ನ ಟೀಕೆ ಮಾಡಿದ್ರೆ ಅದು ಹಿಂದೂಗಳನ್ನ ಟೀಕೆ ಮಾಡಿದ ಹಾಗೆ ಜೆಡಿಎಸ್ ನಾಯಕರು ಇದನ್ನು ಬಹಳ ವ್ಯವಸ್ಥಿತವಾಗಿ ಅಸ್ತ್ರವಾಗಿ ಉಪಯೋಗಿಸುತ್ತಿದ್ದಾರೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಗದಗನಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಇದೇ ದೇವೆಗೌಡ್ರು ಮೈಸೂರಿನಲ್ಲಿ ಆರ್ ಎಸ್ ಎಸ್ ನ್ನು ಹೊಗಳಿದ್ದಾರೆ. ಈಗ ನಿರಾಕರಣೆ ಮಾಡ್ತಿದ್ದಾರೆ ಇದು ರಾಜಕೀಯ ದಾಳ ಅನ್ನೋದು ಸ್ಪಷ್ಟವಾಗಿ ಗೊತ್ತಾಗುತ್ತೆ ಮುಸ್ಲಿಂರ ಓಟಿಗೋಸ್ಕರ ಜೆಡಿಎಸ್ ಪಕ್ಷ ಸಿಂದಗಿ, ಹಾನಗಲ್ಲನಲ್ಲಿ ಆರ್ ಎಸ್ ಎಸ್ ನ್ನು ದೂರುವ ಮೂಲಕ ಮುಸ್ಲಿಂ ಮತ ಸೆಳೆಯಲು ಮುಂದಾಗಿದೆ.
ಇದು ಜೆಡಿಎಸ್ ಮತ್ತು ಬಿಜೆಪಿ ಅವರ ಒಳ ಹೊಂದಾಣಿಕೆ ನಡೆದಿದೆಯಾ ಎನ್ನುವುದಕ್ಕೆ ಪುಷ್ಠಿ ನೀಡುತ್ತಿದೆ. ಬಿಜೆಪಿಯನ್ನ ರಾಜಕೀಯ ಪಕ್ಷವನ್ನಾಗಿ ಏನಾದ್ರೂ ಮಾಡಿಕೊಳ್ಳಿ ಆದರೆ ಇಲ್ಲಿ ಆರ್ ಎಸ್ ಎಸ್ ನ್ನ ಮಧ್ಯೆ ತರುವಂತದ್ದು ಸರಿ ಅಲ್ಲ ಎಂದಿದ್ದಾರೆ.
ಆರ್ ಎಸ್ ಎಸ್ 96 ವರ್ಷದಿಂದ ಶಾಂತವಾಗಿ ಹಿಂದೂ ರಾಷ್ಟ್ರ ನಿರ್ಮಾಣದಲ್ಲಿ ತೊಡಗಿದೆ.ಮುಸ್ಲಿಂ ಓಟುಗಳನ್ನ ಪಡೆಯಲು ಈ ರೀತಿ ಕುತಂತ್ರ ಮಾಡುತ್ತಿದ್ದಾರೆ. ಒಂದೆಡೆ RSS ಬೈಯ್ಯೋದು..ಟೀಕೆ ಮಾಡೋದು..ಮತ್ತೊಬ್ರು ಅದನ್ನ ಹೊಗಳೋದು ಆ ಮೂಲಕ ಮುಸ್ಲಿಂರನ್ನು ಕೆರಳಿಸೋದು..ಇದೊಂದು ತಂತ್ರಗಾರಿಕೆ ಇಬ್ರೂ ಬಾಯಿ ಮುಚ್ಚಿಕೊಂಡು ಆರ್ ಎಸ್ ಎಸ್ ನ ಬಗ್ಗೆ ಮಾತನಾಡೋದನ್ನ ನಿಲ್ಲಿಸಬೇಕು.
ಮಾನ, ಮರ್ಯಾದೆ, ದೇಶದ ಬಗ್ಗೆ ಕಾಳಜಿ ಇದ್ರೆ ಬಿಜೆಪಿ ಮತ್ತು ಜೆಡಿಎಸ್ ಇಬ್ರೂ ಆರ್ ಎಸ್ ಎಸ್ ಬಗ್ಗೆ ಉಸಿರೆತ್ತಬೇಡಿ ಓಟಿಗೋಸ್ಕರ ಏನಾದ್ರೂ ಮಾಡಿಕೊಳ್ಳಿ..ಬೇಕಾದ್ರೆ ಬುರುಕಾ ಹಾಕಿಕೊಂಡು ಓಡಾಡಿ ಎಂದಿದ್ದಾರೆ.
PublicNext
17/10/2021 02:25 pm