ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಒಂದು ನೀವಿರಬೇಕು, ಇಲ್ಲ ನಾನಿರಬೇಕು: ಪ್ರಸನ್ನಾನಂದ ಪುರಿ ಶ್ರೀ

ದಾವಣಗೆರೆ: ಅಕ್ಟೋಬರ್ 20ರ ಒಳಗಾಗಿ ವಾಲ್ಮೀಕಿ ಸಮುದಾಯಕ್ಕೆ ಉದ್ಯೋಗ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಮೀಸಲಾತಿ ನೀಡಲೇಬೇಕು. ಇಲ್ಲದಿದ್ರೆ ನಾನು ಮುಂದಿನ ಹೋರಾಟದ ನಿರ್ಧಾರ ಕೈಗೊಂಡ್ರೆ ಒಂದು ನೀವಿರಬೇಕು, ಇಲ್ಲ ನಾನಿರಬೇಕು ಎಂದು ವಾಲ್ಮೀಕಿ ಮಠದ ಪ್ರಸನ್ನಾನಂದಪುರಿ ಸ್ವಾಮೀಜಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಈಗಾಗಲೇ ರಾಜ್ಯದಲ್ಲಿ ಪಂಚಮಸಾಲಿ 2ಎ ಮೀಸಲಾತಿಗಾಗಿ ಹೋರಾಟ ನಡೆದಿದೆ. ಇದರ ನಡುವೆ ವಾಲ್ಮೀಕಿ ಸಮುದಾಯಕ್ಕೂ ಮೀಸಲಾತಿ ನೀಡಬೇಕೆಂಬ ಒತ್ತಾಯ ಕೇಳಿಬಂದಿದೆ. ಇದರಿಂದ ಸರ್ಕಾರಕ್ಕೆ ಮತ್ತಷ್ಟು ತಲೆಬಿಸಿ ಹೆಚ್ಚಾಗಿದೆ. ಪ್ರಸನ್ನಾನಂದ ಪುರಿ ಶ್ರೀಗಳು ಸರ್ಕಾರಕ್ಕೆ ಅಕ್ಟೋಬರ್ 20ರ ಗಡುವು ನೀಡುವ ಮೂಲಕ ಸರ್ಕಾರಕ್ಕೆ ಮತ್ತಷ್ಟು ಒತ್ತಡ ಹೇರಿದ್ದಾರೆ.

ದಾವಣಗೆರೆ ಜಿಲ್ಲೆಯ ಹರಿಹರದ ರಾಜನಹಳ್ಳಿ ವಾಲ್ಮೀಕಿ ಮಠದಲ್ಲಿ ಜನಜಾಗೃತಿಗಾಗಿ ಜನ ಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀಗಳು ಗಾಂಧೀಜಿಯವರು ಕೊನೆ ಅಸ್ತ್ರವಾಗಿ ಡು ಆರ್ ಡೈ ಎಂದಿದ್ದರು. ನಾವು ಸಹನೆಯಿಂದ ಇದ್ದೇವೆ. ಒಮ್ಮೆ ನೂಕಿದರೆ ನೀವು ಎಲ್ಲಿ ಹೋಗಿ ಬೀಳುತ್ತಿರೋ ನಮಗೆ ಗೊತ್ತಿಲ್ಲ ಎಂದು ಪ್ರಸನ್ನಾನಂದಪುರಿ ಶ್ರೀಗಳು ಎಚ್ಚರಿಕೆ ನೀಡಿದ್ದಾರೆ.

Edited By : Nagaraj Tulugeri
PublicNext

PublicNext

05/10/2021 03:29 pm

Cinque Terre

39.55 K

Cinque Terre

12

ಸಂಬಂಧಿತ ಸುದ್ದಿ