ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತುಮಕೂರು: ಕುಪ್ಪೂರು ಗದ್ದಿಗೆ ಮಠಕ್ಕೆ 13ರ ಬಾಲಕ ಪೀಠಾಧಿಪತಿ ಅಲ್ಲ: ಸಚಿವ ಮಾಧುಸ್ವಾಮಿ

ತುಮಕೂರು: ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಕುಪ್ಪೂರು ಗದ್ದಿಗೆ ಮಠಕ್ಕೆ 13 ವರ್ಷದ ಬಾಲಕ ತೇಜಸ್ ನನ್ನು ಅಧಿಕೃತವಾಗಿ ಮಠಕ್ಕೆ ಪೀಠಾಧಿಪತಿಯಾಗಿ ನೇಮಕ ಮಾಡಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದಾರೆ.

ಈ ಕುರಿತು ಸುದ್ದುಗಾರರೊಂದಿಗೆ ಮಾತನಾಡಿದ ಅವರು, ಶ್ರೀ ಯತೀಶ್ವರ ಶಿವಾಚಾರ್ಯ ಸ್ವಾಮೀಜಿಗಳು ಲಿಂಗೈಕ್ಯರಾದ ವೇಳೆ ಮಠದ ಇತಿಹಾಸದಂತೆ ಮಠದ ಮುಂದಿನ ಉತ್ತರಾಧಿಕಾರಿ ಅಂತ್ಯಕ್ರಿಯೆ ಕಾರ್ಯ ನೆರವೇರಿಸಿಕೊಡಬೇಕಾದ ಹಿನ್ನೆಲೆಯಲ್ಲಿ ಹಾಗೂ ಹಿಂದಿನ ಚಂದ್ರಶೇಖರ ಸ್ವಾಮೀಜಿ ಅವರು ತೇಜಸ್ ಉತ್ತರಾಧಿಕಾರಿ ಆಗಬೇಕೆಂದು ವಿಲ್ ನಲ್ಲಿ ಬರೆದಿಟ್ಟ ಕಾರಣ ತೇಜಸ್ ಅವರ ನೇತೃತ್ವದಲ್ಲಿಯೇ ಅಂತ್ಯಸಂಸ್ಕಾರವನ್ನು ನಡೆಸಲಾಗಿದೆ ಎಂದು ಸ್ಪಷ್ಟಣೆ ನೀಡಿದ್ದಾರೆ.

ಇದನ್ನು ಹೊರತುಪಡಿಸಿ ಅಧಿಕೃತವಾಗಿ ಮಠದ ಪೀಠಾಧಿಕಾರಿಯಾಗಿ ಅವರನ್ನು ನೇಮಿಸಿಲ್ಲ ಎಂದರು. ತೇಜಸ್ ಇನ್ನೂ ಅಧ್ಯಯನ ಮಾಡಬೇಕಿದೆ. ಅಲ್ಲದೇ 18 ವರ್ಷ ಆಗೋವರೆಗೂ ಅವರನ್ನು ಭೇಟಿ ಮಾಡಲು ಅವಕಾಶ ನೀಡುವುದಿಲ್ಲ, ಕಾನೂನು ವ್ಯಾಪ್ತಿಯಲ್ಲಿ ಇದಕ್ಕೆ ಅವಕಾಶವಿಲ್ಲ. ಅವರು 18 ವರ್ಷ ಆದ ನಂತರ ಅವರಿಚ್ಛೆಯಂತೆ ಅವರು ಪೀಠಾಧಿಕಾರಿ ಆಗಬಹುದಾಗಿದೆ. ಈ ಕುರಿತಂತೆ ನ್ಯಾಯಾಧೀಶರೊಬ್ಬರು ನನಗೆ ಸ್ಪಷ್ಟನೆಯನ್ನು ಕೂಡ ಕೇಳಿದ್ದಾರೆ ಎಂದು ಹೇಳಿದರು.

ಶಿವಾನಂದ ಸ್ವಾಮೀಜಿ ಅವರ ಅಂತ್ಯಸಂಸ್ಕಾರ ನೇತೃತ್ವವನ್ನು ವಹಿಸುವಂತಹ ವ್ಯಕ್ತಿ ಬೇಕಾಗಿತ್ತು ಹಾಗಾಗಿ ಅನಿವಾರ್ಯವಾಗಿ ಅವರನ್ನು ಅಂತಿಮ ವಿಧಿವಿಧಾನ ನೇತೃತ್ವ ವಹಿಸಲು ಹೇಳಲಾಗಿತ್ತು. ಹೊರತು ತೇಜಸ್ ಕುಪ್ಪೂರು ಗದ್ದಿಗೆ ಮಠದ ಪೀಠಾಧಿಪತಿ ಅಲ್ಲ ಎಂದರು.

Edited By : Manjunath H D
PublicNext

PublicNext

01/10/2021 05:35 pm

Cinque Terre

52.76 K

Cinque Terre

1

ಸಂಬಂಧಿತ ಸುದ್ದಿ