ಹುಬ್ಬಳ್ಳಿ: ಪಂಚಮಸಾಲಿ ಸಮಾಜದ 2 ಎ ಮೀಸಲಾತಿಗಾಗಿ ಈಗಾಗಲೇ ಸಮಾಜದ ಎಲ್ಲರೂ ಹೋರಾಟ ಕೈಗೊಂಡಿದ್ದಾರೆ.
ಸಮುದಾಯದ ಎಲ್ಲರಿಗೂ 99% ಮೀಸಲಾತಿ ಸಿಗುತ್ತೆ ಅನ್ನೋವಭರವಸೆ ಇದೆ ಎಂದು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.
ನಗರದ ಚೆನ್ನಮ್ಮ ಮೂರ್ತಿಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ಈಗಾಗಲೇ ನಾವೂ 99 ಮೆಟ್ಟಿಲು ಏರಿದ್ದೇವೆ, ಇನ್ನೊಂದು ಮೆಟ್ಟಿಲು ಮಾತ್ರ ಬಾಕಿ ಇದೆ. ಸಿಎಂ ಬೊಮ್ಮಾಯಿಯವರು ಮೀಸಲಾತಿ ನೀಡಿದ್ರೆ ಅವರಿಗೂ ಗೌರವ, ನಮಗೂ ಗೌರವ.ಸಿಎಂ ಬೊಮ್ಮಾಯಿಯವರು ಸಮಾಜಕ್ಕೆ ಕೊಟ್ಟ ಮಾತು ಉಳಿಸಿಕೊಳ್ಳಬೇಕು ಎಂದರು.
ಸದನದಲ್ಲಿ ನಮಗೆ ಸರಿಯಾದ ಉತ್ತರ ಸಿಕ್ಕಿಲ್ಲ, ಸ್ಪಷ್ಟವಾದ ನಿರ್ಣಯ ಬಂದಿಲ್ಲ.ಹೋರಾಟ ಬೆಂಗಳೂರು ತಲುಪುವ ಮುನ್ನ ಸರ್ಕಾರದಿಂದ ಸ್ಪಷ್ಟ ಉತ್ತರ ದೊರೆಯಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ.ಸರ್ಕಾರ ಕೊಟ್ಟ ಮಾತಿನಂತೆ ನಡೆಯದಿದ್ದರೇ ರಾಜ್ಯದಲ್ಲಿ ದೊಡ್ಡ ಕ್ರಾಂತಿಯೇ ಆಗಲಿದೆ ಎಂದು ಎಚ್ಚರಿಕೆ ನೀಡಿದರು.
PublicNext
25/09/2021 04:09 pm