ನಂಜನಗೂಡು ದೇವಸ್ಥಾನ ತೆರವು ವಿಚಾರವಾಗಿ ಆಕ್ರೋಶಿತರಾದ ಸಂಸದ ಪ್ರತಾಪ್ ಸಿಂಹ ದೇವಸ್ಥಾನಕ್ಕೂ ಹಾಗೂ ಮಸೀದಿ ಚರ್ಚ್‌ಗಳಿಗೆ ಹೋಲಿಕೆ ಸರಿಯಲ್ಲ ಎಂದಿದ್ದಾರೆ.
ತೆರವುಗೊಳಿಸಲಾದ ದೇವಸ್ಥಾನ ಜಾಗ ಪರಿಶೀಲನೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ದೇವಸ್ಥಾನದಲ್ಲಿ ವಿಗ್ರಹ ಇರುತ್ತೆ ಪ್ರಾಣ ಪ್ರತಿಷ್ಟಾಪನೆ ಆಗಿರುತ್ತದೆ. ಅದ್ರೆ ಮಸೀದಿಯಲ್ಲಿ ಹಾಗಲ್ಲ. ಅಝಾನ್ ಕೂಗುವಾಗ ಆತನ ಮನಸ್ಸು ಮೆಕ್ಕಾ, ಮದೀನಾದತ್ತ ಕೇಂದ್ರೀಕೃತವಾಗಿರುತ್ತದೆ. ಹಾಗೂ ಚರ್ಚ್‌ನಲ್ಲಿ ಕುಳಿತು ಪ್ರಾರ್ಥನೆ ಮಾಡುವಾಗ ಅವರ ಮನಸ್ಸು ರೋಮ್ ಅಥವಾ ಬೆತ್ಲೆಹೆಮ್‌ನಲ್ಲಿ ಇರುತ್ತೆ. ಹೀಗಾಗಿ ದೇವಸ್ಥಾನದೊಂದಿಗೆ ಮಸೀದಿ, ಚರ್ಚುಗಳ ಹೋಲಿಕೆ ಸರಿಯಲ್ಲ ಎಂದಿದ್ದಾರೆ.
PublicNext
13/09/2021 02:56 pm