ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಜ್ಯ ಸರ್ಕಾರದಿಂದ ಹಿಂದೂಗಳ ಭಾವನೆಗೆ ಧಕ್ಕೆ: ಸಿದ್ದರಾಮಯ್ಯ ಕಿಡಿ

ಬೆಂಗಳೂರು: ನಂಜನಗೂಡಿನಲ್ಲಿ ಹಿಂದೂ ದೇವಸ್ಥಾನವನ್ನು ನೆಲಸಮ ಮಾಡಿದ್ದಕ್ಕೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅಸಮಾಧಾನ ಹೊರ ಹಾಕಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಅವರು, "ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ಪುರಾತನ ಹಿಂದೂ ದೇವಾಲಯವನ್ನು ರಾಜ್ಯ ಸರ್ಕಾರವು ನೆಲಸಮ ಮಾಡಿದ್ದನ್ನು ನಾನು ಖಂಡಿಸುತ್ತೇನೆ. ಈ ಪ್ರದೇಶದ ಜನರೊಂದಿಗೆ ಯಾವುದೇ ಸಮಾಲೋಚನೆ ನಡೆಸದೆ ದೇವಸ್ಥಾನ ನೆಲಸಮಗೊಳಿಸಲಾಗಿದೆ. ಇದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ" ಎಂದು ಕಿಡಿಕಾರಿದ್ದಾರೆ.

"ಸಂಬಂಧಿಸಿದ ಅಧಿಕಾರಿಗಳು ಸರಿಯಾದ ಪ್ರಕ್ರಿಯೆಯನ್ನು ಅನುಸರಿಸಿಲ್ಲ. ದೇವಸ್ಥಾನವನ್ನು ನೆಲಸಮಗೊಳಿಸುವುದು ಅಗತ್ಯವಾಗಿದ್ದಲ್ಲಿ ಅದಕ್ಕೆ ಪರ್ಯಾಯ ಸ್ಥಳವನ್ನು ಒದಗಿಸಬೇಕಿತ್ತು. ಹಿಂದೂಗಳ ಭಾವನೆಗೆ ಧಕ್ಕೆ ತಂದಿರುವ ಈ ಕೃತ್ಯಕ್ಕೆ ರಾಜ್ಯ ಬಿಜೆಪಿ ಸರ್ಕಾರವೇ ಹೊಣೆ. ಸದ್ಯ ನೆಲಸಮಗೊಳಿಸಿದ ದೇವಸ್ಥಾನವನ್ನು ಪುನಃಸ್ಥಾಪಿಸಲು ತಕ್ಷಣ ಪರ್ಯಾಯ ವ್ಯವಸ್ಥೆ ಮಾಡಬೇಕು" ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

Edited By : Vijay Kumar
PublicNext

PublicNext

11/09/2021 04:53 pm

Cinque Terre

94.34 K

Cinque Terre

8

ಸಂಬಂಧಿತ ಸುದ್ದಿ