ಬೆಂಗಳೂರು : ರಾಜ್ಯದ ಜನತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗೌರಿ-ಗಣೇಶ ಹಬ್ಬದ ಶುಭಾಶಯ ಕೋರಿದ್ದಾರೆ.
ಟ್ವೀಟ್ ಮೂಲಕ ಶುಭಾಶಯ ಕೋರಿದ ಬಸವರಾಜ ಬೊಮ್ಮಾಯಿ ‘ರಾಜ್ಯದ ಸಮಸ್ತ ಜನತೆಗೆ ಗೌರಿ ಹಬ್ಬದ ಹಾರ್ದಿಕ ಶುಭಾಶಯಗಳು. ಜಗನ್ಮಾತೆ ಗೌರಿ ಎಲ್ಲರಿಗೂ ಸುಖ, ಶಾಂತಿ, ಉತ್ತಮ ಆರೋಗ್ಯವನ್ನು ಕರುಣಿಸಲಿ, ನಾಡಿಗೆ ಸಮೃದ್ಧಿಯನ್ನು ಅನುಗ್ರಹಿಸಲಿ ಎಂದು ಪ್ರಾರ್ಥಿಸುತ್ತೇನೆ, ಗಣೇಶ ಚತುರ್ಥಿ ಮೂಲಕ ನಾಡಿನಲ್ಲಿ ಎಲ್ಲಾ ಕಂಟಕ ನಿವಾರಣೆಯಾಗಿ ಸುಖ ಶಾಂತಿ ಸಮೃದ್ದಿ ನೆಲೆಸುವಂತೆ ಆಗಲಿ ಎಂದು ಟ್ವೀಟ್ ಮಾಡಿದ್ದಾರೆ. ಕೊರೊನಾ ಮಾರ್ಗಸೂಚಿ ಪಾಲಿಸಿ ಗಣೇಶ ಚತುರ್ಥಿ ಆಚರಿಸಿ ಎಂದು ಮನವಿ ಮಾಡಿದ್ದಾರೆ.
PublicNext
09/09/2021 10:55 pm