ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಂಚಮಸಾಲಿಗೆ ಮೀಸಲಾತಿ ಸಿಗದಿದ್ರೆ ಅ.1ರಿಂದ ಮತ್ತೆ ಹೋರಾಟ

ಶಿವಮೊಗ್ಗ: ಕಳೆದ ಹಲವು ವರ್ಷಗಳಿಂದ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡುವಂತೆ ಒತ್ತಾಯಿಸಿ ಹೋರಾಟ ಮಾಡುತ್ತಲೇ ಇದ್ದೇವೆ. ಈ ಮುಂಚೆ ಧರಣಿ ಕುಳಿತಾಗ ಮೀಸಲಾತಿ ನೀಡಲು 6 ತಿಂಗಳ ಕಾಲಾವಕಾಶ ಕೊಡಿ ಎಂಉ ಸರ್ಕಾರ ಕೇಳಿತ್ತು. ಈಗ ಈ ಕಾಲಾವಕಾಶ ಮುಗಿದಿದೆ. ಹೀಗಾಗಿ ಅ.1ರ ಒಳಗಾಗಿ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಸಿಗದೇ ಇದ್ದಲ್ಲಿ ಮತ್ತೊಮ್ಮೆ ಸತ್ಯಾಗ್ರಹ ಆರಂಭಸಿಸೋದಾಗಿ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಶಿವಮೊಗ್ಗದಲ್ಲಿ ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ವಾಮೀಜಿ, ಪಂಚಮಸಾಲಿ ಸಮುದಾಯದ ಮೀಸಲಾತಿ ವಿಷಯಕ್ಕೆ ಸಂಬಂಧಿಸಿದಂತೆ ಹಳೆ ಮೈಸೂರು ಭಾಗದಿಂದ ಅಭಿಯಾನ ಮಾಡುವ ಮೂಲಕ ಸಂಘಟನೆ ಮಾಡಲಾಗುತ್ತಿದೆ. ಆಗಸ್ಟ್ 26 ರಿಂದ ಅ.1 ರವರೆಗೆ ರಾಜ್ಯದ ಹಲವೆಡೆಗಳಲ್ಲಿ ಈ ಅಭಿಯಾನ ನಡೆಯಲಿದೆ. ಸರ್ಕಾರವನ್ನು ಎಚ್ಚರಗೊಳಿಸುವುದು ಮತ್ತು ಸಮುದಾಯ ಜಾಗೃತಿಗೊಳಿಸುವುದು ಈ ಅಭಿಯಾನದ ಉದ್ದೇಶ ಎಂದರು.

Edited By : Nagaraj Tulugeri
PublicNext

PublicNext

03/09/2021 07:44 am

Cinque Terre

37.72 K

Cinque Terre

10