ಬೆಂಗಳೂರು: ದೊಡ್ಡ ಮನುಷ್ಯರೆಲ್ಲ ಇದ್ದು ಮಾಡೋ ಹಲ್ಕಾ ಕೆಲಸ ಎಲ್ಲ ದೊಡ್ಡದಾ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸದನದಲ್ಲಿ ಪ್ರಶ್ನಿಸಿ ಬಿಜೆಪಿ ನಾಯಕರು, ಶಾಸಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ವಿಧಾನಸೌಧದಲ್ಲಿ ಇಂದು ನಡೆಯುತ್ತಿರುವ ಸದನದಲ್ಲಿ ಸರ್ಕಾರ ಕೊರೊನಾ ಚಿಕಿತ್ಸೆಯಲ್ಲಿ ಯಾವ ರೀತಿಯ ಅವ್ಯವಹಾರ ನಡೆಸುತ್ತಿದೆ, ಯಾವೆಲ್ಲ ರೀತಿ ಭ್ರಷ್ಟಾಚಾರ ನಡೆಸುತ್ತಿದೆ ಎಂಬ ಬಗ್ಗೆ ಕಾಂಗ್ರೆಸ್ ಪಕ್ಷದವರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಈ ವೇಳೆ ಬಿಎಸ್‌ವೈ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುವ ಭರದಲ್ಲಿ ರಮೇಶ್ ಕುಮಾರ್ ಅವರು ಅಸಂಸದೀಯ ಪದ ಬಳಸಿದರು.
'ಹಲ್ಕಾ ಕೆಲಸ' ಪದ ಬಳಕೆ ಮಾಡುತ್ತಿದ್ದಂತೆ ಆಕ್ರೋಶ ವ್ಯಕ್ತಪಡಿಸಿದ ಸಚಿವರಾದ ಸುಧಾಕರ್, ಕೆ.ಎಸ್.ಈಶ್ವರಪ್ಪ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸೇರಿದಂತೆ ಆಡಳಿತ ಪಕ್ಷದ ಸದಸ್ಯರು ರಮೇಶ್ ಕುಮಾರ್ ವಿರುದ್ಧ ಕಿಡಿಕಾರಿದರು. ಇದರಿಂದಾಗಿ ರಮೇಶ್ ಕುಮಾರ್ ತಪ್ಪನ್ನು ಒಪ್ಪಿಕೊಂಡು ಸದನಕ್ಕೆ ಕ್ಷಮೆ ಕೋರಿದರು.
PublicNext
23/09/2020 03:37 pm