ಯಾರೂ ಕೂಡ ಕಾನೂನು ಕೈಗೆತ್ತಿಕೊಳ್ಳಬೇಡಿ. ಶಾಂತಿ, ಸುವ್ಯವಸ್ಥೆ ಕಾಪಾಡೋಣ. ಸಮಾಜಘಾತುಕ ಕೃತ್ಯ ಎಸಗುವವರನ್ನು ಎನ್‌ಕೌಂಟರ್ ಮಾಡಿ ಎಂಬ ಒತ್ತಾಯವನ್ನು ಸಿಎಂಗೆ ಮಾಡಿದ್ದೇನೆ. ಸರ್ಕಾರದ ಒಳಗಡೆ ಇದ್ದು, ದುಷ್ಟ ಶಕ್ತಿಗಳು, ಸಮಾಜಘಾತುಕ, ಭಯೋತ್ಪಾದಕ ಶಕ್ತಿಗಳ ಹೆಡೆಮುರಿ ಕಟ್ಟುತ್ತೇವೆಂದು ಗಂಗೆ ಮೇಲೆ ಪ್ರಮಾಣ, ಪ್ರತಿಜ್ಞೆ ಮಾಡುತ್ತೇನೆ ಎಂದು ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ.
ಮಾಧ್ಯಮದವರ ಜೊತೆ ಮಾತನಾಡಿದ ಅವರು, ಕೆಲ ಅಲ್ಪಸಂಖ್ಯಾತ ಗೂಂಡಾಗಳು ಅಟ್ಟಹಾಸ ಮೆರೆಯುತ್ತಿದ್ದಾರೆ. ಯುಪಿ ಮಾದರಿಯಲ್ಲಿ ತಕ್ಕ ಉತ್ತರ ಕೊಡುವುದಾಗಿ ಸಿಎಂ ಹೇಳಿದ್ದಾರೆ. ಆರೋಪಿಗಳ ಆಸ್ತಿಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಆಗ್ರಹಿಸಿದರು.
ಹಿಂದೂ ಯುವಕರು ಬಳೆ ತೊಟ್ಟುಕೊಂಡಿಲ್ಲ. ನನಗೂ ಜೀವಬೆದರಿಕೆ ಬಂದಿತ್ತು. ನಾನು ಹೆದರಿದೆನಾ? ಧೈರ್ಯವಾಗಿರಿ. ನಿಮ್ಮ ಜೊತೆ ನಾವಿದ್ದೇವೆ. ಬಿಜೆಪಿ ಪ್ರತಿಭಟನೆ ನಡೆಸುವ ಮೂಲಕ ನಮಗೆ ತೊಂದರೆಯಾಗುತ್ತದೆ. ಕಾಂಗ್ರೆಸ್ ಗೆ ಲಾಭ ಆಗುತ್ತದೆ. ನಾವೆಲ್ಲರೂ ಎಚ್ಚೆತ್ತುಕೊಳ್ಳಬೇಕಿದೆ ಎಂದರು.
ಹಿಂದೂ ಯುವಕರ ಹತ್ಯೆಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದರೆ ರಾಜೀನಾಮೆ ನೀಡುವುದಾಗಿ ಹೇಳಿದ್ದೆ. ಸಿಎಂ, ಸಂಘ ಪರಿವಾರದ ನಾಯಕರು ಬೇಡ ಎಂದಿದ್ದಾರೆ. ಅವರೆಲ್ಲರ ಮಾತಿಗೆ ಬೆಲೆ ಕೊಟ್ಟಿದ್ದೇನೆ. ಇದು ಕಾಂಗ್ರೆಸ್ ಗೆ ಅನುಕೂಲ ಆಗುತ್ತದೆ, ಬೇರೆಯದ್ದೇ ಸಂದೇಶ ಹೋಗುತ್ತೆ ಎಂಬ ಕಾರಣಕ್ಕೆ ಈ ನಿರ್ಧಾರ ಕೈಬಿಟ್ಟಿದ್ದೇನೆ ಎಂದು ಹೇಳಿದರು.
PublicNext
30/07/2022 01:58 pm