ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಟ್ಕಳ: ಉರ್ದು ಭಾಷೆಯಲ್ಲಿ ನಗರಸಭೆ ನಾಮಫಲಕ: ಕನ್ನಡ ಸಂಘಟನೆಗಳಿಂದ ಆಕ್ರೋಶ

ಉತ್ತರಕನ್ನಡ ಜಿಲ್ಲೆಯಲ್ಲಿ ಕನ್ನಡ ನಾಮಫಲಕ ಮುಂದುವರೆದ ವಿವಾದ ಮತ್ತೆ ಮುಂದುವರೆದಿದೆ. ಕೆಲ ದಿನಗಳ ಹಿಂದೆ ಕಾರವಾರದ ವಾರ್ಡ್‌ಗಳಲ್ಲಿ ನಗರಸಭೆಯಿಂದ ಮರಾಠಿಯಲ್ಲಿ ನಾಮಫಲಕ ಬರೆಸಲಾಗಿತ್ತು. ಇದಾದ ನಂತರ ಈಗ ಭಟ್ಕಳ ಪುರಸಭೆ ಕಾರ್ಯಾಲಯಕ್ಕೆ ಉರ್ದು ಭಾಷೆಯಲ್ಲಿ ನಾಮಫಕ ಅಳವಡಿಸಲಾಗಿದೆ. ಇದನ್ನು ಖಂಡಿಸಿ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿವೆ.

ಇದರಿಂದ ಭಟ್ಕಳ ಪುರಸಭೆ ಮುಂದೆ ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಕನ್ನಡ ಹೊರತು ಪಡಿಸಿ ಬೇರೆ ಭಾಷೆಯಲ್ಲಿ ನಾಮಫಲಕ ಅಳವಡಿಸಬಾರದು ಅನ್ನೋದು ಕನ್ನಡ ಪರ ಸಂಘಟನೆಗಳ ಒತ್ತಾಯವಾಗಿದೆ. ಇನ್ನೊಂದೆಡೆ ಬೇರೆ ಸಮುದಾಯದವರು ಉರ್ಪು ಭಾಷೆಯಲ್ಲೂ ನಾಮಫಲಕ ಬೇಕೆಂದು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆ ತೀವ್ರಗೊಂಡಾಗ ಮಧ್ಯ ಪ್ರವೇಶಿಸಿದ ಪೊಲೀಸರು ಮನವೊಲಿಸಲು ಯತ್ನಿಸಿದ್ದಾರೆ. ಇತ್ತ ಕಡೆ ಕನ್ನಡ ಪರ ಸಂಘಟನೆಗಳ ನಾಯಕರು ಸಂಜೆಯೊಳಗಾಗಿ ಉರ್ದು ನಾಮಫಲಕ ತೆಗೆದು ಕನ್ನಡ ಹಾಗೂ ಇಂಗ್ಲೀಷ್ ನಾಮಫಲಕ ಮಾತ್ರ ಹಾಕಬೇಕೆಂದು ಗಡುವು ನೀಡಿದ್ದಾರೆ.

Edited By : Manjunath H D
PublicNext

PublicNext

28/06/2022 04:43 pm

Cinque Terre

50.25 K

Cinque Terre

2

ಸಂಬಂಧಿತ ಸುದ್ದಿ