ಬೆಂಗಳೂರು: ತಾನು MLA ಮಗಳು ಎನ್ನುವ ಅಹಂನಲ್ಲಿ ಶಾಸಕ ಅರವಿಂದ ಲಿಂಬಾವಳಿ ಪುತ್ರಿ ಬೀದಿ ರಂಪಾಟ ಮಾಡಿರುವ ವಿಡಿಯೋ ವೈರಲ್ ಆಗಿದೆ.
ಗುರುವಾರ ಸಂಜೆ BMW ಕಾರೊಂದು ರ್‍ಯಾಶ್ ಡ್ರೈವಿಂಗ್ ಮಾಡ್ಕೊಂಡು, ಕ್ವಿನ್ಸ್ ರಸ್ತೆಯ ಮಾರ್ಗವಾಗಿ ಕಾಫಿ ಬೋರ್ಡ್ ಜಂಕ್ಷನ್ ಕಡೆಗೆ ಬರ್ತಿತ್ತು. ಈ ವೇಳೆ ಟ್ರಾಫಿಕ್ ಸಿಗ್ನಲ್ ಉಲ್ಲಂಘನೆ ಕಾರಣ ಪೊಲೀಸರು ಅಡ್ಡ ಹಾಕಿದರು. ಆಗಲೇ ನೋಡಿ ಗಲಾಟೆ ಶುರುವಾಗಿದ್ದು.
ಹೀಗೆ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿ ಬಂದ ಶಾಸಕರ ಪುತ್ರಿ ಪೊಲೀಸರಿಗೆ ಅವಾಜ್ ಹಾಕಿದ್ದಾಳೆ. ಫೈನ್ ಕಟ್ಟಲ್ಲ.. ಏನೀಗ ಅಂತಾ ಧಮ್ಕಿ ಹಾಕಿದ್ದಾಳೆ.
ನಾನು ಎಂಎಲ್ ಎ ಮಗಳು ಗೊತ್ತಾ ಎಂದು ಪೊಲೀಸರಿಗೆ ಆವಾಜ್ ಹಾಕಿದ್ದಳು. ಈ ರಂಪಾಟವನ್ನು ಸೆರೆ ಹಿಡಿದಿದ್ದಕ್ಕೆ ಮಾಧ್ಯಮದವರ ಮೇಲೂ ಕಿರಿಕ್ ರಾಣಿ ಹೈಡ್ರಾಮಾ ಸೃಷ್ಟಿಸಿದ್ದಾಳೆ.
ಇನ್ನು ಮಗಳ ಬೀದಿ ಕಾಳಗದ ವಿಡಿಯೋ ನೋಡಿದ ಶಾಸಕ ಅರವಿಂದ ಲಿಂಬಾವಳಿ ಕ್ಷಮೆ ಯಾಚನೆ ಮಾಡಿದ್ದಾರೆ. ನನ್ನ ಮಗಳ ನಡೆಯಿಂದ ಯಾರಿಗೇ ನೋವಾಗಿದ್ರೂ ಕ್ಷಮೆ ಕೇಳ್ತೇನೆ ಎಂದಿದ್ದಾರೆ.
ಇನ್ನು ಶಾಸಕರೊಬ್ಬರು ಬೇಷರತ್ ಕ್ಷಮೆ ಕೇಳಿದ್ದಕ್ಕೆ ಕಾರಣ ಪುತ್ರಿಯ ಅಹಂಕಾರದ ನಡೆ ಅಲ್ಲದೆ ಮತ್ತಿನ್ನೇನು ಅಲ್ವೇ?
PublicNext
10/06/2022 11:55 am