ಮೈಸೂರು: ನನಗೆ ಗೃಹ ಖಾತೆ ಕೊಟ್ಟರೆ ಸಮರ್ಥವಾಗಿ ನಿಭಾಯಿಸುವೆ ಎಂದು ಹೇಳುವ ಮೂಲಕ ಕೃಷಿ ಸಚಿವ ಬಿ.ಸಿ ಪಾಟೀಲ್ ಗೃಹ ಖಾತೆಯ ಮೇಲೆ ಕಣ್ಣಿಟ್ಟಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು 25 ವರ್ಷ ಪೊಲೀಸ್ ಕೆಲಸ ಮಾಡಿದ್ದೇನೆ. ಹೀಗಾಗಿ ನನಗೆ ಗೃಹ ಖಾತೆ ಕೊಟ್ಟರೆ ಸಮರ್ಥವಾಗಿ ನಿಭಾಯಿಸುವೆ. ಅರಗ ಜ್ಞಾನೇಂದ್ರ ಕೂಡ ಸಮರ್ಥವಾಗಿ ನಿಭಾಯಿಸಿದ್ದಾರೆ ಎಂದು ಹೇಳಿದ್ದಾರೆ.
ಹುಬ್ಬಳ್ಳಿ ಗಲಭೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಹುಬ್ಬಳ್ಳಿ ಗಲಭೆಯಲ್ಲಿ ಪೋಸ್ಟ್ ಹಾಕಿದವನನ್ನು ಬಂಧಿಸಲಾಗಿದೆ. ಆತನನ್ನ ವಶಕ್ಕೆ ಕೊಡಿ ಅಂತ ಸಾವಿರಾರು ಜನ ಸೇರಿ ಗೂಂಡಾ ವರ್ತನೆ ಮಾಡಿದ್ರೆ ಸರಿನಾ? ಕಾನೂನು ಯಾರೂ ಕೈಗೆತ್ತಿಕೊಳ್ಳಲು ಆಗೋದಿಲ್ಲ. ಅಂತವರ ರಕ್ಷಣೆಯನ್ನ ಕಾಂಗ್ರೆಸ್ ಮಾಡುತ್ತಾರೆ. ಇವರು ದೇಶದ ಪರವೋ ವಿರೋಧವೋ?’ ಎಂದು ವಾಗ್ದಾಳಿ ನಡೆಸಿದ್ದಾರೆ.
PublicNext
22/04/2022 02:38 pm