ಹಾವೇರಿ: ಸಿಎಂ ಬಸವರಾಜ ಬೊಮ್ಮಾಯಿಯವರು ತವರು ಜಿಲ್ಲೆಗೆ ಆಗಮಿಸುತ್ತಿರುವ ಹಿನ್ನಲೆಯಲ್ಲಿ ಮುಖ್ಯ ಮಂತ್ರಿಗಳ ಭಯಕ್ಕೆ ತಪ್ಪು ಮಾಡಿದವರಿಗೆ ಜಿಲ್ಲಾಡಳಿತ ಪಾಠ ಕಲಿಸಿದೆ.
6 ಅಧಿಕಾರಿಗಳನ್ನು ಧೀಡಿರ್ ಅಮಾನತ್ತು ಮಾಡಿ ಜಿಲ್ಲಾಧಿಕಾರಿ ಸಂಜಯ್ ಶೆಟ್ಟೆಣ್ಣನವರ ಆದೇಶ ಹೊರಡಿಸಿದ್ದಾರೆ. ಅತಿ ವೃಷ್ಠಿಯಿಂದ ಹಾಳಾದ ಮನೆಗಳ ಪರಿಶೀಲನೆ ವೇಳೆ ಲೋಪವೆಸಗಿದ ಹಿನ್ನಲೆಯಲ್ಲಿ ಅಮಾನತು ಮಾಡಿದ್ದಾರೆ. ಕೆಲವು ಒತ್ತಡದಿಂದ ಅವ್ಯವಹಾರ ಮಾಡಿರುವುದು ತಿಳಿದು ಬಂದಿದೆ.
ಈ ಕುರಿತು ಜಿಲ್ಲಾಧಿಕಾರಿಗಳೇ ಮಾಹಿತಿ ನೀಡಿದ್ದಾರೆ. ಕೆಲವು ಅಧಿಕಾರಿಗಳು ಸರಕಾರಕ್ಕೆ ಹಾನಿ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಈ ಹಿನ್ನಲೆಯಲ್ಲಿ ಸವಣೂರು ಗ್ರಾಮಲೆಕ್ಕಾಧಿಕಾರಿ ಆರ್.ಬಿ. ಮಾಚಕ್ಕನವರ, ಸಹಾಯಕ ಇಂಜಿನಿಯರ್ ಎಚ್.ಡಿ.ಬಂಡಿವಡ್ಡರ, ಪುರಸಭೆ ಮುಖ್ಯಾಧಿಕಾರಿ ಕೃಷ್ಣಾ ಕಟ್ಟಿಮನಿ, ಪಿ ಆರ್ ಡಿ ಇಂಜಿನಿಯರ್ ಹನುಮಂತಪ್ಪ ಮಾದರ, ಗ್ರಾಮಲೆಕ್ಕಾಧಿಕಾರಿ ಕುಮಾರ ಬಾಲೆಹೋಸರು, ಶ್ರೀಮತಿ ಶೈಲಾ ಮಂಟೂರ ಪಿಡಿಓ ಸಸ್ಸ್ಪೆಂಡ್ ಮಾಡಲಾಗಿದೆ ಎಂದರು.
ಕರ್ನಾಟಕ ನೌಕರ ನಾಗರಿಕ ಸೇವೆ ನಿಯಮ ಉಲ್ಲಂಘಿಸಿದ ಕಾರಣ ಕ್ರಮ ಕೈಗೊಳ್ಳಲಾಗಿದೆ. ಹೀಗಾಗಿ ತಪ್ಪಿತಸ್ಥರ ಮೇಲೆ ಕ್ರಮ ತೆಗೆದುಕೊಳ್ಳಲಾಗಿದೆ. ಸವಣೂರು ಉಪವಿಭಾಗಾಧಿಕಾರಿ ಅನ್ನಪೂರ್ಣ ಹಾಗೂ ತಹಶೀಲ್ದಾರ ಅವರು ಮರು ಪರಿಶೀಲನೆ ನಡೆಸಿದ ನಂತರ ಹೊರ ಬಿದ್ದ ಲೋಪದೋಷಗಳು ಸವಣೂರು ತಾಲೂಕಿನ ಅಲ್ಲಿಪುರ, ಶಿರಬಡಗಿ, ಹುರುಳಿಕುಪ್ಪಿ ಸೇರಿದಂತೆ ಹಲವು ಗ್ರಾಮದಲ್ಲಿ ಲೋಪದೋಷ ಮಾಡಿದ್ದ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
PublicNext
06/12/2021 06:08 pm