ಪುಷ್ಪ ವ್ಯಾಪಾರಿಗಳ ಪ್ರತಿಭಟನೆ ವಿಚಾರವಾಗಿ ಉಡುಪಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಸಿಎಂ ,
ಹೂವಿನ ವ್ಯಾಪಾರಿಗಳಿಗೆ ತೊಂದರೆ ಕೊಡಬೇಕು ಎಂಬುದು ನನ್ನ ಉದ್ದೇಶ ಅಲ್ಲ.ಖಾಸಗಿಯಾಗಿ ಅವರು ಹೂವಿನ ವ್ಯಾಪಾರವನ್ನು ಮಾಡಬಹುದು.
ಸರಕಾರಿ ಕಾರ್ಯಕ್ರಮದಲ್ಲಿ ಮಾತ್ರ ಹೂಗುಚ್ಚ ,ಹಾರ ತುರಾಯಿ ಬೇಡ ಎಂದು ಹೇಳಿದ್ದೇನೆ. ಸರಕಾರಿ ಜಾಗದಲ್ಲಿ ಗಾರ್ಡ್ ಆಫ್ ಹಾನರ್ ಬೇಡ. ಬೆಂಗಳೂರಿಗೆ ಹೋದ ತಕ್ಷಣ ಆದೇಶವನ್ನು ಹೊರಡಿಸುತ್ತೇನೆ. ಪೊಲೀಸ್ ಸಮಾರಂಭದಲ್ಲಿ ಗೌರವ ವಂದನೆ ಕೊಟ್ಟರೆ ಸಾಕು ಎಂದು ಹೇಳಿದ್ದಾರೆ.
ಇನ್ನು ಮುಂದೆ ಯಾರೂ ಕಟೌಟ್, ಹೋರ್ಡಿಂಗ್ ಹಾಕಬೇಡಿ ಎಂದು ಮನವಿ ಮಾಡಿದ ಮುಖ್ಯಮಂತ್ರಿಗಳು,
ಶುಭಕೊರುವ ಹೋರ್ಡಿಂಗ್ ಯಾರೂ ಹಾಕಬೇಡಿ. ಪಕ್ಷದವರಿಗೆ ಮತ್ತು ಅಭಿಮಾನಿಗಳಿಗೆ ನಾನು ಮನವಿ ಮಾಡುತ್ತೇನೆ.
ನಾನು ಮುಖ್ಯಮಂತ್ರಿಯಾದರೂ ಈ ನಾಡಿನ ಸೇವಕ. ಈ ಭಾವನೆ ಕಡಿಮೆಯಾಗಬಾರದು ಎಂಬ ಉದ್ದೇಶದಿಂದ ಈ ಆದೇಶ ಹೊರಡಿಸಿದ್ದೇನೆ ಎಂದು ಹೇಳಿದ್ದಾರೆ.
PublicNext
12/08/2021 08:02 pm