ಬೆಂಗಳೂರು: ಅಕ್ರಮ ಆಸ್ತಿ ಸಂಪಾದನೆ ಆರೋಪ ಹಿನ್ನೆಲೆಯಲ್ಲಿ ಇ.ಡಿ. ಅಧಿಕಾರಿಗಳು 2 ದಿನಗಳ ಹಿಂದೆ ಶಾಸಕ ಜಮೀರ್ ಅಹ್ಮದ್ ಖಾನ್ ಅವರು ಆಸ್ತಿ ಪರಿಶೀಲನೆಗಾಗಿ ದಾಳಿ ನಡೆಸಲಾಗಿತ್ತು. ಸದ್ಯ ಶಾಸಕ ಜಮೀರ್ ಅಹ್ಮದ್ ಖಾನ್ ಗೆ ಜಾರಿ ನಿರ್ದೇಶನಾಲಯದಿಂದ (ED) ಬುಲಾವ್ ಬಂದಿದೆ. ಈ ಹಿನ್ನೆಲೆ ಹೆಚ್ ಎಎಲ್ ನಿಂದ ದೆಹಲಿಗೆ ತೆರಳಿದ್ದಾರೆ. ದೆಹಲಿಗೆ ಬುಲಾವ್ ಬಂದಿರುವ ಹಿನ್ನೆಲೆ ಶಾಸಕ ಜಮೀರ್ ಗೆ ಸಂಕಷ್ಟ ಎದುರಾಗಿದೆ.
ಗಮನಾರ್ಹವೆಂದರೆ ನಿನ್ನೆ ಬೆಳಿಗ್ಗೆವರೆಗೂ ತಮ್ಮ ನಿವಾಸಗಳು, ಕಚೇರಿಗಳ ಮೇಲೆ ನಡೆದಿದ್ದ ಇ.ಡಿ ಅಧಿಕಾರಿಗಳ ದಾಳಿ ಬಳಿಕ ಇ.ಡಿ ಅಧಿಕಾರಿಗಳು ಸಮಾಧಾನಗೊಂಡಿದ್ದಾರೆ. ಅವರಿಗೆ ಏನೂ ಸಿಕ್ಕಿಲ್ಲ. ನನಗೂ ನೆಮ್ಮದಿ ಸಿಕ್ಕಿದೆ ಎಂದು ಶಾಸಕ ಜಮೀರ್ ಹೇಳಿದ್ದರು. ಆದರೆ ಕ್ಷಿಪ್ರವಾಗಿ ದಾಖಲೆಗಳ ಪರಿಶೀಲನೆ ಮುಗಿಸಿರುವ ಇ.ಡಿ ಅಧಿಕಾರಿಗಳು ಮಾರನೆಯ ದಿನವೇ ಶಾಸಕ ಜಮೀರ್ ಅಹ್ಮದ್ ಖಾನ್ ಗೆ ನೋಟಿಸ್ ತಕ್ಷಣ ದೆಹಲಿ ಕಚೇರಿಗೆ ಬರುವಂತೆ ಸೂಚಿಸಿದ್ದಾರೆ. ಹಾಗಾಗಿ ಜಮೀರ್ ಇದೀಗ ದೆಹಲಿಗೆ ದೌಡಾಯಿಸಿದ್ದಾರೆ.
PublicNext
07/08/2021 03:05 pm