ಚಿಕ್ಕಬಳ್ಳಾಪುರ: ಜಿಲ್ಲೆಯ ಹಿರೇನಾಗವಲ್ಲಿ ಸಮೀಪದ ಗುಡಿಬಂಡೆ ಅರಣ್ಯ ಪ್ರದೇಶದಲ್ಲಿ ಸೋಮವಾರ ತಡರಾತ್ರಿ ಸಂಭವಿಸಿದ ಜಿಲೆಟಿನ್ ಸ್ಫೋಟ ಪ್ರಕರಣವನ್ನು ಸಿಐಡಿ ತನಿಖೆಗೆ ಒಳಪಡಿಸಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಗೃಹ ಸಚಿವರು, ''ಗೋಮಾಳ ಜಾಗದಲ್ಲಿ ಕ್ವಾರಿ ನಡೆಸಲಾಗುತ್ತಿತ್ತು. ನಾಗರಾಜ್ ಎಂಬುವರಿಗೆ ಸೇರಿದ ಈ ಕ್ವಾರಿಯ ಮೇಲೆ ಫೆಬ್ರವರಿ 7ರಂದು ಪೊಲೀಸರು ರೇಡ್ ಮಾಡಿ ಕೆಲ ವಾಹನಗಳನ್ನ ಸೀಜ್ ಮಾಡಿದ್ದರು. ಈ ವೇಳೆ ಸ್ಫೋಟಕಗಳನ್ನ ಮುಚ್ಚಿಟ್ಟಿರುವ ಸಾಧ್ಯತೆ ಇದೆ. ಹೊರಗಿನಿಂದ ಸ್ಫೋಟಕ ತರಲಾಗಿತ್ತೆ ಎಂಬುದು ಗೊತ್ತಾಗಬೇಕು. ಈ ಪ್ರಕರಣದಲ್ಲಿ ಸ್ಥಳೀಯ ಪೊಲೀಸರೂ ಶಾಮೀಲಾಗಿರಬಹುದು. ಎಸ್ಪಿ ಆಗಲೀ, ಪಿಎಸ್ಐ ಆಗಲೀ, ಇನ್ಸ್ಪೆಕ್ಟರ್ ಆಗಲಿ ಯಾರೇ ತಪ್ಪಿತಸ್ಥರು ಇದ್ದರೂ ಕ್ರಮ ಕೈಗೊಳ್ಳುತ್ತೇವೆ. ಗಣಿ ಇಲಾಖೆ, ಕಂದಾಯ ಇಲಾಖೆ, ಅರಣ್ಯ ಇಲಾಖೆಯಿಂದ ತಪ್ಪಾಗಿದೆಯಾ ಎಂಬುದೆಲ್ಲವನ್ನೂ ಅವಲೋಕಿಸಲು ಸಿಐಡಿ ತನಿಖೆ ನಡೆಸಲಾಗುತ್ತದೆ ಎಂದು ತಿಳಿಸಿದರು.
ತಜ್ಞರು ಪ್ರಾಥಮಿಕ ಮಾಹಿತಿ ಪ್ರಕಾರ ಪೆಟ್ರೋಲಿಯಂ ಜೆಲ್ ಮತ್ತು ಅಮ್ಮೋನಿಯಮ್ ನೈಟ್ರೇಟ್ನಿಂದ ಸ್ಫೋಟ ಸಂಭವಿಸಿರಬಹುದು ಎನ್ನಲಾಗಿದೆ. ಜಿಲೆಟಿನ್ ಕಡ್ಡಿಗಳನ್ನ ಎತ್ತಿಕೊಂಡು ಹೋಗುವಾಗ ಗಾಳಿಯಲ್ಲೇ ಸ್ಫೋಟವಾಗಿದೆ. ಇಬ್ಬರು ವ್ಯಕ್ತಿಗಳ ದೇಹ ಸಂಪೂರ್ಣವಾಗಿ ಛಿದ್ರವಾಗಿರುವುದರಿಂದ ಅವರಿಬ್ಬರು ಆ ಸ್ಫೋಟಕವನ್ನ ಸಾಗಿಸುತ್ತಿದ್ದಿರಬಹುದು ಎಂಬ ಶಂಕೆ ಇದೆ ಎಂದು ಸಚಿವರು ಹೇಳಿದರು.
PublicNext
23/02/2021 12:18 pm