ಚಿಕ್ಕಮಗಳೂರು : ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳನ್ನ ನಿಷೇಧಿಸುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಹಿಂದುತ್ವದ ಪರ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಬ್ಯಾಟಿಂಗ್ ಮಾಡಿದ್ದಾರೆ.
ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಇರುತ್ತೆ ಎಂದ ಸಿ.ಟಿ.ರವಿ ಗೊಳ್ಳಿಯಲ್ಲಿ ಮೀನು ತೆಗೆದುಕೊಳ್ಳಬೇಡಿ ಅಂತ ಫರ್ಮಾನ್ ಹೊರಡಿಸಿದ್ರು ನಾವು ಹಿಂದೂಗಳು ಮಟನ್ ಸ್ಟಾಲ್ ಇಟ್ರೆ ಅಲ್ಲಿ ಮುಸ್ಲಿಮರು ಮಟನ್ ತೆಗೆದುಕೊಳ್ತಾರಾ?
ನಮ್ಮ ದೇವರಿಗೆ ಆಗಲ್ಲ ಅನ್ನಲ್ವಾ? ಅವರ ದೇವರಿಗೆ ಹಿಂದೂ ಮಟನ್ ಸ್ಟಾಲ್ ಇಟ್ಟರೆ ಆಗಲ್ಲ ಆದ್ರೆ ಅವರ ದೇವರಿಗೆ ಒಪ್ಪಿಸಿದ್ದನ್ನ ನಮ್ಮ ದೇವರು ಒಪ್ಪಿಕೊಳ್ಳುತ್ತೆ ನಮಗೆ ಉದಾರತೆ ಪಾಠ ಯಾರೂ ಹೇಳೋದು ಬೇಡ.
ಅಂಬೇಡ್ಕರ್ ಸಂವಿಧಾನದಲ್ಲಿ ಹೇಳಿಲ್ವಾ ಜಾತ್ಯಾತೀತ ಅಂತ ತುರ್ತು ಪರಿಸ್ಥಿತಿಯಲ್ಲಿ ಕಾಂಗ್ರೆಸ್ ನವರು ಜಾತ್ಯಾತೀತ ಪದ ತಂದಿಟ್ಟಿದ್ದು ಪದ ಶಬ್ದ ಇರಬೇಕೋ ಬೇಡ್ವೋ ಅನ್ನೋದರ ಬಗ್ಗೆ ಚರ್ಚೆ ಆಗಬೇಕು ಗಾಂಧಿ ಹಿಂದೂಗಳ ಭಜನೆಯಲ್ಲಿ ಈಶ್ವರ ಅಲ್ಲಾ ತೇರೆನಾಮ್ ಅಂತ ಹೇಳಿದ್ರು ನಮ್ಮ ಎಲ್ಲಾ ದೇವಸ್ಥಾನದಲ್ಲಿಯೂ ಭಜನೆಯಲ್ಲಿ ಹೇಳ್ತೇವೆ ಯಾವುದಾದ್ರೂ ಒಂದು ಮಸೀದಿಯಲ್ಲಿ ಹೇಳಿರೋದು ಕೇಳಿದ್ದೀರಾ?
ಒಬ್ಬ ಮೌಲ್ವಿ, ಮುಸ್ಲಿಂ ಧರ್ಮಗುರು ದೇವ ಒಬ್ಬ ನಾಮ ಹಲವು ಅಂತಾ ಹೇಳಿರೋದು ಕೇಳಿದ್ದೀರಾ?
ಅವ್ರಿಗೆ ಭೌತ್ವವನ್ನು ಒಪ್ಪಿಕೊಳ್ಳೋಕೆ ಆಗಲ್ಲ, ನಮಗ್ಯಾಕೆ ಮೋಸ ಮಾಡಬೇಕು ಎಂದು ಚಿಕ್ಕಮಗಳೂರಿನಲ್ಲಿ ಸಿ.ಟಿ.ರವಿ ಪ್ರಶ್ನೆ ಮಾಡಿದ್ದಾರೆ.
PublicNext
23/03/2022 09:02 pm