ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ ಬ್ರೇಕಿಂಗ್: ರಾಜ್ಯದಲ್ಲಿ ಸದ್ಯಕ್ಕೆ ಬುಲ್ಡೋಜರ್ ಪ್ರಯೋಗ ಇಲ್ಲ; ಆರಗ ಜ್ಞಾನೇಂದ್ರ

ರಾಜ್ಯದಲ್ಲಿ ಉತ್ತರ ಪ್ರದೇಶ ಮಾದರಿಯಲ್ಲಿ ಬುಲ್ಡೋಜರ್ ಪ್ರಯೋಗ ಮಾಡುವಂತಹ ಸನ್ನಿವೇಶ ಇನ್ನೂ ಸೃಷ್ಟಿಯಾಗಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಉಡುಪಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು, ರಾಜ್ಯದಲ್ಲಿ ಉತ್ತರ ಪ್ರದೇಶ ಮಾದರಿಯ ಪರಿಸ್ಥಿತಿ ಇನ್ನೂ ನಿರ್ಮಾಣವಾಗಿಲ್ಲ. ಇಲ್ಲಿ ಕಾನೂನನ್ನು ಪಾಲಿಸುವ ಮನಸ್ಥಿತಿ ಇನ್ನೂ ಉಳಿದುಕೊಂಡಿದೆ. ಇನ್ನೂ ಮಂಡಿಸಲು ಹಲವು ವಿಧೇಯಕಗಳಿವೆ, ಮತಾಂತರ ನಿಷೇಧ ಕಾನೂನು ವಿಧಾನ ಪರಿಷತ್‌ನಲ್ಲಿ ಒಪ್ಪಿಗೆ ಪಡೆಯಲು ಬಾಕಿ ಉಳಿದಿದೆ ಎಂದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಕಾಂಗ್ರೆಸ್‌ನವರಿಗೊಂದು ಕಾನೂನು ಉಳಿದವರಿಗೊಂದು ಕಾನೂನು ಇಲ್ಲ. ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ತನಿಖೆ ಎದುರಿಸಬೇಕು. ನಿರಪರಾಧಿಯಾಗಿದ್ದರೆ ಅವರು ಹೊರ ಬರುತ್ತಾರೆ, ಅಪರಾಧ ಮಾಡಿದ್ದರೆ ಶಿಕ್ಷೆಯಾಗುತ್ತದೆ. ಪ್ರತಿಭಟನೆ ಮಾಡುವ ಅವಶ್ಯಕತೆ ಇಲ್ಲ ಎಂದರು.

ನಿನ್ನೆ ಮೃತರಾದ ಎ.ಜಿ.ಕೊಡ್ಗಿ ಪಂಚಾಯತ್ ರಾಜ್ ವ್ಯವಸ್ಥೆಗೆ ತುಂಬ ಕೊಡುಗೆ ನೀಡಿದ್ದಾರೆ. ಅವರು ನನಗೆ ತುಂಬ ಬೇಕಾದವರು. ಅವರಿಗೆ ಸಕಲ ಸರಕಾರಿ ಗೌರವದೊಂದಿಗೆ ನಮನ ಸಲ್ಲಿಸಿದ್ದೇವೆ ಎಂದರು.

Edited By :
PublicNext

PublicNext

14/06/2022 05:09 pm

Cinque Terre

58.45 K

Cinque Terre

11

ಸಂಬಂಧಿತ ಸುದ್ದಿ