ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿಕ್ಷಣ ಬೇಕಾದವರು ಸಮವಸ್ತ್ರ ನಿಯಮ ಪಾಲಿಸಲೇಬೇಕು: ಸಚಿವ ಬಿ.ಸಿ ನಾಗೇಶ್

ಬೆಂಗಳೂರು: ಧರ್ಮ ಪಾಲನೆ ಮಾಡೋದಕ್ಕೆ ನಮ್ಮಿಂದ ಯಾವುದೇ ವಿರೋಧವಿಲ್ಲ. ಆದ್ರೆ ಶಾಲೆ-ಕಾಲೇಜುಗಳಲ್ಲಿ ಧರ್ಮ ಪಾಲನೆ ಆಗುವಂತಿಲ್ಲ. ಆದರೆ ಶಿಕ್ಷಣ ಬೇಕಾದರೆ ಅಲ್ಲಿನ ನಿಯಮಗಳನ್ನು ಪಾಲಿಸಲೇಬೇಕು. ಮಕ್ಕಳು ಸಮವಸ್ತ್ರ ಧರಿಸಿಯೇ ಶಾಲೆಗಳಿಗೆ ಬರಬೇಕು. ಹೈಕೋರ್ಟ್ ತೀರ್ಪು ಆಧರಿಸಿ ಮುಂದಿನ ನಿರ್ಧಾರವನ್ನು ಕೈಗೊಳ್ಳುತ್ತೇವೆ. ಈಗ ಮಾತ್ರ ಶಿಕ್ಷಣ ಬೇಕಾದವರು ಸಮವಸ್ತ್ರ ಧರಿಸಿಯೇ ಶಾಲೆಗೆ ಬರಬೇಕು ಎಂಬುದಾಗಿ ಶಿಕ್ಷಣ ಸಚಿವರು ಖಡಕ್ ಸೂಚನೆ ನೀಡಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಮಾಜಿ ಸಿಎಂ ಸಿದ್ಧರಾಮಯ್ಯಗೆ ನಾಚಿಕೆ ಆಗಬೇಕು. ಒಂದು ಸಮುದಾಯದ ಮತವನ್ನು ಪಡೆಯೋದಕ್ಕೆ ಅವರು ಬೇಕಾದಂತೆ ಮಾತನಾಡುತ್ತಿದ್ದಾರೆ. ಅವರ ಅವಧಿಯಲ್ಲಿಯೇ ಈ ಸಮವಸ್ತ್ರ ಮಾಡಿದ್ದು. ಇದರ ಹಿಂದೆ ನಮ್ಮ ಯಾವುದೇ ಪಿತೂರಿಯಿಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದರು.

ಶಿಕ್ಷಣ ಬೇಕಾದವರು ಶಾಲೆಗೆ ಸಮವಸ್ತ್ರ ಧರಿಸಿಯೇ ಬರಬೇಕು. ಅದರ ಹೊರತಾಗಿ ಬೇರಾವುದೇ ಉಡುಪು ಧರಿಸೋದಕ್ಕೆ ಅವಕಾಶವಿಲ್ಲ. ಧರ್ಮ ಪಾಲನೆ ಮಾಡುವುದಕ್ಕೆ ನಾವು ವಿರೋಧಿಸಿಲ್ಲ. ಶಿಕ್ಷಣ ಬೇಕಾದ್ರೆ ಅಲ್ಲಿಯ ನಿಮಯದಂತೆ ಬರಬೇಕು. ಹೈಕೋರ್ಟ್ ತೀರ್ಪು ಆಧರಿಸಿ, ಸಮವಸ್ತ್ರ ಸಂಹಿತಿಯ ನಿಯಮದ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ. ಅಲ್ಲಿಯವರೆಗೆ ಈಗಿರುವ ನಿಯಮ ಮುಂದುವರೆಯಲಿದೆ ಎಂದು ಹೇಳಿದರು.

Edited By : Nagaraj Tulugeri
PublicNext

PublicNext

04/02/2022 01:19 pm

Cinque Terre

45.37 K

Cinque Terre

28

ಸಂಬಂಧಿತ ಸುದ್ದಿ