ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರೈತರ ಪ್ರತಿಭಟನೆ: ಇನ್ನೆರಡು ವಾರಗಳಲ್ಲಿ ಪರಿಹಾರ ಕಂಡುಕೊಳ್ಳಿ ಎಂದ ಸುಪ್ರೀಂ ಕೋರ್ಟ್

ನವದೆಹಲಿ : ರೈತರ ಧರಣಿಯಿಂದಾಗಿ ದೆಹಲಿ-ಯುಪಿ ಗಡಿಯಲ್ಲಿ ರಸ್ತೆ ಬಂದ್ ಮಾಡುವ ವಿರುದ್ಧದ ಅರ್ಜಿಯ ಕುರಿತು ಸುಪ್ರೀಂ ಕೋರ್ಟ್ʼನಲ್ಲಿ ಸೋಮವಾರ ಮಹತ್ವದ ವಿಚಾರಣೆ ನಡೆಯಿತು. ಸುಪ್ರೀಂ ಕೋರ್ಟ್ ಮತ್ತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮೇಲೆ ಪ್ರಶ್ನೆಗಳನ್ನ ಎತ್ತಿದ್ದು, ರಸ್ತೆಯ ಸಂಚಾರ ಈ ರೀತಿ ನಿಲ್ಲಿಸಲು ಸಾಧ್ಯವಿಲ್ಲ ಮತ್ತು ಸರ್ಕಾರ ಪರಿಹಾರವನ್ನ ಕಂಡುಕೊಳ್ಳಬೇಕು ಎಂದು ಹೇಳಿತು. ರೈತರಿಗೆ ಪ್ರತಿಭಟಿಸುವ ಹಕ್ಕಿದೆ. ಆದ್ರೆ,ರಸ್ತೆಗಳಲ್ಲಿ ಸಂಚಾರ ನಿಲ್ಲಿಸಲು ಸಾಧ್ಯವಿಲ್ಲ ನ್ಯಾಯಾಲಯ ತಿಳಿಸಿದೆ.

ಎರಡು ವಾರಗಳಲ್ಲಿ ಇದಕ್ಕೆ ಪರಿಹಾರ ಕಂಡುಕೊಳ್ಳುವಂತೆ ನ್ಯಾಯಾಲಯವು ಕೇಂದ್ರ ಮತ್ತು ಯುಪಿ ಸರ್ಕಾರಕ್ಕೆ ಸೂಚಿಸಿದೆ. ಸಾಮಾನ್ಯ ಜನರಿಗೆ ತೊಂದರೆಯಾಗದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಸ್ಪರ ಸಹಕಾರ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ನ್ಯಾಯಾಲಯವು ಕೇಂದ್ರ ಮತ್ತು ಉತ್ತರ ಪ್ರದೇಶ ಸರ್ಕಾರಕ್ಕೆ ನೇರವಾಗಿ ಹೇಳಿದೆ, ನಿಮಗೆ ಸಾಕಷ್ಟು ಸಮಯ ಸಿಕ್ಕಿದೆ, ಈಗ ಏನಾದರೂ ಮಾಡಿ ಎಂದಿದೆ. ಇನ್ನು ಸುಪ್ರೀಂ ಕೋರ್ಟ್ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 20 ರಂದು ನಡೆಸಲಿದೆ.

Edited By : Nagaraj Tulugeri
PublicNext

PublicNext

23/08/2021 07:42 pm

Cinque Terre

47.71 K

Cinque Terre

5

ಸಂಬಂಧಿತ ಸುದ್ದಿ